ಇನ್ನೊಬ್ಬರು ಬೆದರಿಕೆ ಹಾಕಿದರೆ ಬೇಲ್ ರದ್ದತಿ ಇಲ್ಲ; ಹೈಕೋರ್ಟ್
ಕ್ರಿಮಿನಲ್ ಪ್ರಕರಣವೊಂದರಲ್ಲಿ ಜಾಮೀನು ಪಡೆದಿರುವ ಆರೋಪಿಯ ಸಂಬಂಧಿಕರು, ಮತ್ತೊಬ್ಬ ಆರೋಪಿಗೆ ತನಿಖೆಗೆ ಸಹಕರಿಸದಂತೆ ಬೆದರಿಕೆ ಹಾಕಿದಲ್ಲಿ, ಮೊದಲ ಆರೋಪಿಯ ಜಾಮೀನನ್ನು ರದ್ದು ಮಾಡುವ ಅಧಿಕಾರವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಮಾದಕ ದ್ರವ್ಯ, ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅಬ್ದುಲ್ ಖಾದಿರ್ ಗೌಸ್ ಪೀರ್‌ಗೆ ಮಂಜೂರು ಮಾಡಲಾಗಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಅಧಿಕಾರಿ ಅರ್ಜಿ ಸಲ್ಲಿಸಿದ್ದರು.