ಭಾರೀ ಮಳೆ; ಶವ ಸಾಗಿಸುವ ಟ್ರ್ಯಾಕ್ಟರ್ ಕೆಸರಲ್ಲಿ ಸಿಕ್ಕಿ ಪರದಾಟ
ಬೀದರ್
ಭಾರಿ ಮಳೆ ಹಿನ್ನಲೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಡಣದ ಲಿಂಗಾಯತ ಸ್ಮಶಾನ ಭೂಮಿಗೆ ಶವ ಸಾಗಿಸಲು ಸಂಬಂಧಿಕರು ಪರದಾಡಿದರು. ಮಳೆಯಿಂದಾಗಿ ರಸ್ತೆಯೆಲ್ಲಾ ಕೆಸರುಮಯವಾಗಿದ್ದ ಪರಿಣಾಮ ಶವ ಸಾಗಿಸುವ ಟ್ರಾಕ್ಟರ್ ಕೆಸರಲ್ಲಿ ಸಿಕ್ಕಿ ಹಾಕಿಕೊಂಡು ಶವ ಇಳಿಸಲು ಆಗದೆ ಜನರ ಹೈರಾಣಾಗಿದ್ದಾರೆ. ರಸ್ತೆ ಮಾಡದ ಜನಪ್ರತಿನಿಧಿಗಳ ವಿರುದ್ಧ ಭಾಲ್ಕಿ ಪಟ್ಟಣದ ಸಾಮಾಜಿಕ ಕಾರ್ಯಕರ್ತ ಕಿರಣ ಖಂಡ್ರೆ ಅಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ವಿರುದ್ದ ಹರಿಹಾಯ್ದಿದ್ದಾರೆ. ಇನ್ನಾದರೂ ಅಧಿಕಾರಿಗಳು ರಸ್ತೆ ನಿರ್ಮಿಸುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಂಡಬೇಕು ಎಂದು ಹೇಳಿದರು.