ಗೋಕುಲ ರೋಡ ಪೋಲೀಸರ ಬಲೆಗೆ ಖತರ್ನಾಕ್ ಮೊಬೈಲ್ ಕಳ್ಳರು

ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಗುಲ್ಬರ್ಗಾ ಸೇರಿದಂತೆ ರಾಜ್ಯದ ಅನೇಕ ಪ್ರದೇಶಗಳ ಸಂತೆಯಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಮೊಬಾಯಿಲ್ ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಹಾಗೂ ಕರ್ನಾಟಕದ ಖತರ್ನಾಕ್ ಕಳ್ಳರ ತಂಡವನ್ನು ಹುಬ್ಬಳ್ಳಿಯ ಗೋಕುಲ ರಸ್ತೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರನ್ನು ಹನುಮಂತಪ್ಪಬಂಡಿವಡ್ಡರ, ಕುಮಾರ ರಾಮಪ್ಪ ಕುಳ್ಳ, ಸೋಮಶೇಖರ ಕುಂದಗೋಳ ಎಂದು ತಿಳಿದು ಬಂದಿದೆ. ಬಂಧಿತರಿಂದ 6 ಲಕ್ಷ ರೂಪಾಯಿ ಮೌಲ್ಯದ ಮೊಬಾಯಿಲಗಳು ಹಾಗೂ ಕೃತ್ಯಕ್ಕೆ ಬಳಸಿದ ಟೆಂಪೂ ಹಾಗೂ ರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಹೇಮಾವತಿ, ಕೃಷ್ಣ, ಕರ್ಕಿ, ಯಲ್ಲವ್ವ ಹಾಗೂ ಲಕ್ಷ್ಮಿ ಎಂಬುವರು ತಲೆಮರೆಸಿಕೊಂಡಿದ್ದು ಅವರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ.ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಇನ್ಸ್ಪೆಕ್ಟರ್ ಜೆ. ಎಂ. ಕಾಲಿಮಿರ್ಚಿ, ಪಿ ಎಸ್ ಆಯ್ ಗಳಾದ ಕಾಳೆ ಮತ್ತು ವಿಶ್ವನಾಥ ಹಾಗೂ ಸಿಬ್ಬಂದಿಗಳಾದ ಹೊಂಕಣದವರ, ಬೆಳಗಾವಿ, ನೀಲಗಾರ, ಎಲ್. ವೈ. ನಾಯಕ, ಬೆನ್ನೂರ್, ನಾಗಭೂಷಣ್ ಹಾಗೂ ಹಿರೇಮಠ ಅವರು ಕಾರ್ಯಚಾರಣೆಯಲ್ಲಿ ಪಾಲ್ಗೊಂಡಿದ್ದರು. ಇವರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ..