ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ ಕ್ಷೇತ್ರದಲ್ಲಿ ಮಸೀದಿ ಪಾಲಿಟಿಕ್ಸ್ ಸದ್ದು

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಸೀದಿ ಪಾಲಿಟಿಕ್ಸ್ ಸದ್ದು ಕೇಳಿ ಬರುತ್ತಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ ಕ್ಷೇತ್ರದಲ್ಲಿ ಮಸೀದಿ ತೆರವಿಗಾಗಿ ಹೋರಾಟ ಶುರುವಾಗಿದೆ. ಸಾರಥಿ ನಗರದಲ್ಲಿದ್ದ ಮನೆಯನ್ನೇ ಫಾತಿಮಾ ಮಸೀದಿಯಾಗಿ ನಿರ್ಮಾಣ ಮಾಡಿ ವಕ್ಫ್ ಬೋರ್ಡ್‌ಗೆ ಹಸ್ತಾಂತರ ಮಾಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆ ಮಸೀದಿ ತೆರವಿಗೆ ಬಿಜೆಪಿ ನಾಯಕರು, ಹಿಂದು ಸಂಘಟನೆಗಳ ನಾಯಕರು ಸ್ಥಳೀಯ ನಿವಾಸಿಗಳ ಜೊತೆ ಮಹತ್ವದ ಸಭೆ ನಡೆಸಿ ಮಸೀದಿ ತೆರವಿಗೆ ಹೋರಾಟ ಮಾಡಲು ಮುಂದಾಗಿದ್ದಾರೆ.