ಟೀಂ ಇಂಡಿಯಾಗೆ ಬಿಗ್ ಶಾಕ್ ಲಂಕಾ ವಿರುದ್ಧದ 2ನೇ ಟಿ20 ಪಂದ್ಯದಿಂದ ಸ್ಟಾರ್ ಬ್ಯಾಟ್ಸ್ ಮನ್ 'ಸಂಜು ಸ್ಯಾಮ್ಸನ್' ಔಟ್

ಮುಂಬೈ : ಶ್ರೀಲಂಕಾ ವಿರುದ್ಧ ಗುರುವಾರ ನಡೆಯಲಿರುವ ಮೂರು ಟಿ20 ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಭಾರಿ ಹಿನ್ನಡೆ ಅನುಭವಿಸಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಗಾಯಗೊಂಡಿದ್ದಾರೆ.
ಸಂಜು ಸ್ಯಾಮ್ಸನ್ ಅವರ ಮೊಣಕಾಲಿಗೆ ಗಾಯವಾಗಿದ್ದು, ಗಾಯ ಎಷ್ಟು ಗಂಭೀರವಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದ್ರೆ, ಎರಡನೇ ಟಿ20 ಪಂದ್ಯಕ್ಕೆ ಸಂಜು ಆಯ್ಕೆಗೆ ಲಭ್ಯವಿರುವುದಿಲ್ಲ ಎಂಬುದು ಖಚಿತವಾಗಿದೆ. ಆದ್ರೆ, ಬಿಸಿಸಿಐ ಅಧಿಕೃತವಾಗಿ ಯಾವುದನ್ನೂ ಪ್ರಕಟಿಸಿಲ್ಲ.
ಮುಂಬೈನ ವಾಂಖೆಡೆಯಲ್ಲಿ ಶ್ರೀಲಂಕಾ ತಂಡದ ಇನ್ನಿಂಗ್ಸ್'ನ ಮೊದಲ ಓವರ್ನಲ್ಲಿ ಡೈವ್ ಮಾಡುವ ಮೂಲಕ ಕ್ಯಾಚ್ ಹಿಡಿಯುವಾಗ ಸ್ಯಾಮ್ಸನ್ ಗಾಯಗೊಂಡರು. ಚೆಂಡು ನೆಲದ ಮೇಲೆ ಬೀಳುವಾಗ ಅವರ ಕೈಯಿಂದ ಹೊರಗೆ ಹೋಯಿತು. ಪಂದ್ಯದ ಸಮಯದಲ್ಲಿ, ಅವರಿಗೆ ಗಾಯದ ಬಗ್ಗೆ ತಿಳಿದಿರಲಿಲ್ಲ. ಪಂದ್ಯ ಮುಗಿದ ನಂತರ ಸ್ಯಾಮ್ಸನ್ ಊತವನ್ನ ಅನುಭವಿಸಿದರು. ಈ ಕಾರಣಕ್ಕಾಗಿ, ಅವುಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ನಂತ್ರವಷ್ಟೇ ಗಾಯದ ತೀವ್ರತೆ ತಿಳಿಯಲಿದೆ.