ರೊನಾಲ್ಡೊರನ್ನು ಹೊರಹಾಕಿದ ಪೋರ್ಚುಗಲ್ ಕೋಚ್ ಫೆರ್ನಾಂಡೊ ಸ್ಯಾಂಟೋಸ್‌ ಗೆ ಕೊಕ್

ರೊನಾಲ್ಡೊರನ್ನು ಹೊರಹಾಕಿದ ಪೋರ್ಚುಗಲ್ ಕೋಚ್ ಫೆರ್ನಾಂಡೊ ಸ್ಯಾಂಟೋಸ್‌ ಗೆ ಕೊಕ್

ಲಿಸ್ಬನ್: ಈ ಬಾರಿ ಫುಟ್ಬಾಲ್ ವಿಶ್ವಕಪ್‌ ನಲ್ಲಿ ಪ್ರಬಲ ಪೋರ್ಚುಗಲ್‌ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಮೊರಾಕ್ಕೊ ವಿರುದ್ಧ ಸೋತು ಹೊರಬಿತ್ತು. ಆ ತಂಡದ ವಿಶ್ವವಿಖ್ಯಾತ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊರನ್ನು ತಂಡದಿಂದ ಹೊರಹಾಕಿ, ಕೋಚ್‌ ಫೆರ್ನಾಂಡೊ ಸ್ಯಾಂಟೋಸ್‌ ಬಲವಾದ ನಿರ್ಧಾರ ಮಾಡಿದ್ದರು.

ಇದೀಗ ಅದಕ್ಕಾಗಿ ಬೆಲೆ ತೆತ್ತಿದ್ದಾರೆ.

ರೊನಾಲ್ಡೊ ಅವರನ್ನು ಪಂದ್ಯದಲ್ಲಿ ಹೊರಕ್ಕೆ ಕೂರಿಸುವ ಒಂದು ಪಂದ್ಯದಲ್ಲಿ ಫ‌ಲ ನೀಡಿದರೂ, ಮುಂದಿನ ಪಂದ್ಯದಲ್ಲಿ ಕೈಕೊಟ್ಟಿತು. ಅದೇನೇ ಇರಲಿ, ಇಲ್ಲಿ ಕೋಚ್‌ ಫೆರ್ನಾಂಡೊ ಸ್ಯಾಂಟೋಸ್‌ರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಗಿದೆ.

ಪೋರ್ಚುಗಲ್‌ ಪಾಲಿಗೆ ಇಡೀ ಕೂಟ ಕೋಚ್‌ ಸ್ಯಾಂಟೋಸ್‌ ಮತ್ತು ನಾಯಕ ರೊನಾಲ್ಡೊ ನಡುವಿನ ಭಿನ್ನಮತವಾಗಿ ಬದಲಾಯಿತು. ಲೀಗ್‌ ಹಂತದಲ್ಲಿ ಮೊದಲು ರೊನಾಲ್ಡೊರನ್ನು ಪಂದ್ಯದಿಂದ ಬೇಗ ಸ್ಯಾಂಟೋಸ್‌ ವಾಪಸ್‌ ಕರೆಸಿಕೊಂಡಿದ್ದರು. ಅದಾದ ಮೇಲೆ ಪ್ರೀ ಕ್ವಾರ್ಟರ್‌ನಲ್ಲಿ ಪಂದ್ಯದ ಬಹುತೇಕ ಅವಧಿ ಹೊರಕ್ಕೆ ಕೂರಿಸಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ಅರ್ಧಕ್ಕೂ ಹೆಚ್ಚು ಅವಧಿ ಹೊರಕ್ಕೆ ಕೂರಿಸಿದ್ದರು.

ಒಟ್ಟಿನಲ್ಲಿ ಇದರಿಂದ ಸ್ಯಾಂಟೋಸ್‌ ಅವಧಿ ಮುಗಿದಿದೆ. ರೊನಾಲ್ಡೊ ಕಥೆ ಏನಾಗುತ್ತದೆ ಎಂದು ಕಾದು ನೋಡಬೇಕು.