ಜಡ್ಜ್' ಹುದ್ದೆಗೆ ರಾಜೀನಾಮೆ ನೀಡಿ 'ಜೆಡಿಎಸ್' ಸೇರ್ಪಡೆ : ಅಚ್ಚರಿ ನಿರ್ಧಾರ ಕೈಗೊಂಡ ನ್ಯಾಯಾಧೀಶ
ಗದಗ : ಸುಭಾಷ್ ಚಂದ್ರ ರಾಠೋಡ ಎಂಬುವವರು ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ಸುಭಾಷ್ ಚಂದ್ರ ರಾಠೋಡ ಅವರು ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಕಲಬುರಗಿ, ಚಿತ್ತಾಪುರ ಮತ್ತು ಗದಗ ಜೆಎಂಎಫ್ಸಿ ಕೋರ್ಟ್ನ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಭಾಷ್ಚಂದ್ರ ರಾಠೋಡ ಅವರು ಸದ್ಯ ರಾಜಕೀಯಕ್ಕೆ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜ.18ರಂದು ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿದ ಇವರು ಫೆ.4ರಂದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಸದ್ಯ, ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿಯಲು ನಿರ್ಧರಿಸಿದ್ದಾನೆ ಎನ್ನಲಾಗಿದೆ.