ಕೆಕೆಆರ್ ತಂಡಕ್ಕೆ ಹೊಸ ಕ್ಯಾಪ್ಟನ್, ಅಯ್ಯರ್ ಬದಲಿಗೆ 'ನಿತೀಶ್ ರಾಣಾ'ಗೆ ನಾಯಕತ್ವ

ನವದೆಹಲಿ : ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 16ನೇ ಸೀಸನ್‌ಗೆ ಹೊಸ ನಾಯಕನನ್ನು ಘೋಷಿಸಿದೆ. ಸ್ಟಾರ್ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರು ಐಪಿಎಲ್ 16ನೇ ಸೀಸನ್‌ನಲ್ಲಿ ಕೆಕೆಆರ್‌ನ ಜವಾಬ್ದಾರಿಯನ್ನ ವಹಿಸಿಕೊಳ್ಳಲಿದ್ದಾರೆ. ಕಳೆದ ಹಲವು ವರ್ಷಗಳಿಂದ ಜೊತೆಯಾಗಿರುವ ನಿತೀಶ್ ರಾಣಾ ಅವರನ್ನ ಶ್ರೇಯಸ್ ಅಯ್ಯರ್ ಬದಲಿಗೆ ತಂಡದ ನಾಯಕರನ್ನಾಗಿ ಮಾಡಲಾಗಿದೆ.
ನಿತೀಶ್ ರಾಣಾ ಅವರು 2018 ರಿಂದ KKR ನೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಹಿಂದೆ ಶಾರ್ದೂಲ್ ಠಾಕೂರ್, ನರೈನ್ ಮತ್ತು ರಸೆಲ್ ಅವರ ಹೆಸರುಗಳು ಕೆಕೆಆರ್‌ನ ಹೊಸ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದವು. ಆದ್ರೆ, ಫ್ರಾಂಚೈಸಿ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿದ್ದು, ಭಾರತೀಯ ಬ್ಯಾಟ್ಸ್ ಮನ್ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಣಾ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು.
ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್ ಆಗಿ ರಾಣಾ ಅವರ ದಾಖಲೆ ಉತ್ತಮವಾಗಿದೆ. ನಿತೀಶ್ ರಾಣಾ 2016 ರಲ್ಲಿ ಮುಂಬೈ ಇಂಡಿಯನ್ಸ್ ಪರ ಪಾದಾರ್ಪಣೆ ಮಾಡಿದ್ದರು. ತಮ್ಮ ಎರಡನೇ ಸೀಸನ್ ನಲ್ಲಿಯೇ ರಾಣಾ 300ಕ್ಕೂ ಹೆಚ್ಚು ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದರು. ಆದಾಗ್ಯೂ, 2018 ರ ಮೆಗಾ ಹರಾಜಿನ ಮೊದಲು, KKR ನಿತೀಶ್ ರಾಣಾಗೆ ಸಹಿ ಹಾಕಿತ್ತು. ಅಂದಿನಿಂದ, ರಾಣಾ ಫ್ರಾಂಚೈಸಿಗಾಗಿ ಐದು ಸೀಸನ್‌ಗಳನ್ನ ಆಡಿದ್ದಾರೆ.