ಕೊಪ್ಪಳದಲ್ಲಿ ಘೋರ ದುರಂತ: ಸ್ವಿಮ್ಮಿಂಗ್‌ ಪೂಲ್‌ ನಲ್ಲಿ ಬಿದ್ದು ಕಂದಾಯ ಇಲಾಖೆ ನೌಕಾರ ಸಾವು

ಕೊಪ್ಪಳದಲ್ಲಿ ಘೋರ ದುರಂತ: ಸ್ವಿಮ್ಮಿಂಗ್‌ ಪೂಲ್‌ ನಲ್ಲಿ ಬಿದ್ದು ಕಂದಾಯ ಇಲಾಖೆ ನೌಕಾರ ಸಾವು

ಕೊಪ್ಪಳ: ಸ್ವಿಮ್ಮಿಂಗ್‌ ಪೂಲ್‌ ನಲ್ಲಿ ಬಿದ್ದು ಕಂದಾಯ ಇಲಾಖೆ ನೌಕಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದ ಬಳಿಯ ಪೇದರ್ಸ್‌ ರೆಸಾರ್ಟ್‌ ನಲ್ಲಿ ಘಟನೆ ನಡೆದಿದೆ. ಸ್ವಿಮ್ಮಿಂಗ್‌ ಪೂಲ್‌ ಗೆ ಬಿದ್ದಿದ್ದಾರೆ.

26 ವರ್ಷದ ತಾಯಪ್ಪ ಮೃತಪಟ್ಟ ವ್ಯಕ್ತಿ.ಊಟ ಸೇವಿಸಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ಹೋದಾಗ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸಾವಿನ ಹಿಂದೆ ಸಾಕಷ್ಟು ಅನುಮಾನ ಹುಟ್ಟಿದೆ.ವಾರ್ಷಿಕ ಕ್ರೀಡಾಕೂಟದ ಹಿನ್ನೆಲೆ ಕೊಪ್ಪಳ ತಹಶೀಲ್ದಾರ್ ಕಚೇರಿಯಿಂದ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಸಹೋದ್ಯೋಗಿಗಳ ಜೊತೆ ಪಾರ್ಟಿಗೆ ಹೋದಾಗ ಈ ಘಟನೆ ಸಂಭವಿಸಿದ ಎನ್ನಲಾಗಿದೆ. ತಾಯಪ್ಪ ಮೂಲತಹ ರಾಯಚೂರು ಜಿಲ್ಲೆಯವರು ಎಂದು ತಿಳಿದು ಬಂದಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.