ಬಿಜೆಪಿಗೆ ಅನುಕೂಲವಾಗುವಂತೆ ಜೆಡಿಎಸ್‌ನಿಂದ 'ಮುಸ್ಲಿಂ' ತಂತ್ರ : ಸಿದ್ದರಾಮಯ್ಯ ಆರೋಪ
ಹುಬ್ಬಳ್ಳಿ.ಅ-7 ಜೆಡಿಎಸ್ ಪಕ್ಷಕ್ಕೆ ಯಾವಾಗಲೂ ಕಾಂಗ್ರೆಸ್ ಪಕ್ಷವೇ ಟಾರ್ಗೇಟ್ ವಿನಃ ಬಿಜೆಪಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇಂದಿಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹಾಸನ, ಮಂಡ್ಯದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ.
ಅದರೆ ಸಿಂದಗಿ ಮತ್ತು ಹಾನಗಲ್ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುವ ಕಾರಣಕ್ಕೆ ಒಳಸಂಚು ಮಾಡಿದ್ದಾರೆ ಎಂದು ದೂರಿದರು. ಐಎಎಸï, ಐಪಿಎಸ್ ಗಳಲ್ಲಿ ಆರ್.ಎಸï.ಎಸ್ ಕಾರ್ಯಕರ್ತರ ಆಯ್ಕೆ ಬಗ್ಗೆ ಗೊತ್ತಿಲ್ಲ. ಆದರೆ ಇದೊಂದು ಕೋಮುವಾದ ಸಂಘಟನೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಇದರ ಮುಖವಾಡವೇ ಬಿಜೆಪಿ.ಅವರ ಅಣತಿಯಂತೆ ಬಿಜೆಪಿ ನಡೆದುಕೊಳ್ಳುತ್ತಿದೆ ಎಂದು ಅರೋಪಿಸಿದರು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವುದೇ ಇವರ ಕೆಲಸ. ಆದರೆ ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸಿ ಸಮಾನವಾಗಿ ಕಾಣುತ್ತದೆ ಎಂದು ವಾಗ್ದಾಳಿ ನಡೆಸಿದರು.ಬಿಜೆಪಿ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ ಬೆಲೆ ಏರಿಕೆ ನಿಯಂತ್ರಿಸಲು ವಿಫಲರಾಗಿದ್ದಾರೆ ಕಿಡಿಕಾರಿದರು