ಏನಿದು ಬ್ಲೂ ಆಧಾರ್​ ಕಾರ್ಡ್? ಇದನ್ನ ನೀವು ಪಡೆಯುವುದು ಹೇಗೆ? ಇಲ್ಲಿದೆ ಡಿಟೇಲ್ಸ್​..

ಏನಿದು ಬ್ಲೂ ಆಧಾರ್​ ಕಾರ್ಡ್? ಇದನ್ನ ನೀವು ಪಡೆಯುವುದು ಹೇಗೆ? ಇಲ್ಲಿದೆ ಡಿಟೇಲ್ಸ್​..

ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಆಧಾರ್​ ಕಾರ್ಡ್​ ಪ್ರಮುಖ ದಾಖಲೆ ಪುರಾವೆ ಆಗಿದೆ. ಪ್ರತಿಯೊಬ್ಬ ಭಾರತೀಯರು ಆಧಾರ್​ ಕಾರ್ಡ್ ಮಾಡಿಸುವುದು ಕಡ್ಡಾಯವಾಗಿದೆ. ಯಾವುದೇ ಕೆಲಸ ಮಾಡಬೇಕಾದ್ರೂ ಆಧಾರ್​ ಕಾರ್ಡ್ ಬೇಕೇ ಬೇಕು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿರುವ 12- ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯು ಈಗ ನಮ್ಮ ಜನಸಂಖ್ಯಾ ಹಾಗೂ ಬಯೋಮೆಟ್ರಿಕ್​ ಡೇಟಾವನ್ನು ಒಳಗೊಂಡಿರುವ ಕಾರಣ ಮಹತ್ವದ ಗುರುತಿನ ದಾಖಲೆಗಳಲ್ಲಿ ಆಧಾರ್​ ಕಾರ್ಡ್ ಒಂದಾಗಿದೆ. ಇನ್ನು ಆಧಾರ್​ ಕಾರ್ಡ್​ನಲ್ಲಿ ಒಟ್ಟು 2 ವಿಧ ಇದೆ ಎಂದು ಎಲ್ಲರಿಗೂ ತಿಳಿದಿಲ್ಲ. ಎಲ್ಲಿರಿಗೂ ತಿಳಿದಿರುವುದು ಸಾಮನ್ಯ ಆಧಾರ್​ ಕಾರ್ಡ್, ಇದು ವಯಸ್ಕರಿಗೆ ಮಾತ್ರ ನೀಡಲಾಗುತ್ತೆ. ಮತ್ತೊಂದು ವಿಧದ ಆಧಾರ್​ ಕಾರ್ಡ್ ಸಹ ಇದೆ. ಇದನ್ನು ಬ್ಲೂ ಕಲರ್​ ಆಧಾರ್​ ಕಾರ್ಡ್ ಅಥವಾ ಬಾಲ ಆಧಾರ್​ಕಾರ್ಡ್ ಎಂದು ಕರೆಯಲಾಗುತ್ತೆ. ಇದರ ಬಗ್ಗೆ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ ನೋಡಿ...

ಏನಿದು ಬ್ಲೂ ಆಧಾರ್​ ಕಾರ್ಡ್​?
ಇದು ಮಕ್ಕಳಿಗಾಗಿ ಮಾತ್ರ ನೀಡಲಾಗುತ್ತೆ. ನವಜಾತ ಶಿಶುಗಳ ಪೋಷಕರು ಭಾರತದಲ್ಲಿ ಬಾಲ​ ಆಧಾರ್​ ಕಾರ್ಡ್​ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. 2018ರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಈ ಬಾಲ​ ಆಧಾರ್​ ಕಾರ್ಡ್ ಪರಿಚಯಿಸಿತು. ಸಾಮನ್ಯರ ಆಧಾರ್​ ಕಾರ್ಡ್​ಗೂ, ಬಾಲ್​ ಆಧಾರ್​ ಕಾರ್ಡ್​ಗೂ ಬಣ್ಣದ ಹೊರತಾಗಿ ಬೇರೆ ಯಾವ ವ್ಯತಾಸವಿಲ್ಲ.

: ದಿನಸಿ ವ್ಯಾಪಾರಿಗಳಿಗಾಗಿ ಬಂದಿದೆ ವಿಶಿಷ್ಟ ಮೊಬೈಲ್ ಆಯಪ್.. ಇನ್ಮುಂದೆ ಸೇವೆ ಮತ್ತಷ್ಟು ಸುಲಭ

ಸಾಮಾನ್ಯ ಆಧಾರ್​ ಕಾರ್ಡ್ ಪಡೆಯಲು ತಮ್ಮ ಫಿಂಗರ್​ಪ್ರಿಂಟ್ ಹಾಗೂ ಐರಿಸ್​ ಸ್ಕ್ಯಾನ್​ನಲ್ಲಿ ನೊಂದಾಯಿಸಿಕೊಳ್ಳಬೇಕು. ಆದರೆ ಬಾಲ ಆಧಾರ್​ ಕಾರ್ಡ್​ನಲ್ಲಿ ಇಂತಹ ಮಾಹಿತಿ ಯಾವುದು ಇರುವುದಿಲ್ಲ. ಬಾಲ ಆಧಾರ್​ ಕಾರ್ಡ್ ಪಡೆಯಲು ಮಗುವಿನ ಜನನ ಪ್ರಮಾಣ ಪತ್ರ ಹಾಗೂ ಪೋಷಕರಲ್ಲಿಒಬ್ಬರ ಆಧಾರ್​ ಕಾರ್ಡ್ ಸಂಖ್ಯೆ ನೀಡಬೇಕು. ಬಾಲ ಆಧಾರ್​ ಕಾರ್ಡ್ ಅನ್ನು ಪೋಷಕರೊಬ್ಬರ ಆಧಾರ್​ ಕಾರ್ಡ್​ಗ ಲಿಂಕ್​ ಮಾಡಲಾಗುತ್ತೆ.ಮಗುವಿಗೆ 5 ವರ್ಷ ದಾಟಿದ ನಂತರ, ಬಾಲ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ.

ಬ್ಲೂ ಅಥವಾ ಬಾಲ ಆಧಾರ್ ಕಾರ್ಡ್ ಪಡೆಯಲು ಹೀಗೆ ಮಾಡಿ

1. ದಾಖಲಾತಿ ಕೇಂದ್ರಕ್ಕೆ ಪೋಷಕರು ಭೇಟಿ ನೀಡಿ ದಾಖಲಾತಿ ನಮೂನೆಯನ್ನ ಭರ್ತಿ ಮಾಡಬೇಕು
2. ಮಗುವಿನ ಜನನ ಪ್ರಮಾಣ ಪತ್ರ ಹಾಗೂ ಒಬ್ಬ ಪೋಷಕರ ಆಧಾರ್​ ಕಾರ್ಡ್ ಸಂಖ್ಯೆ, ಮೊಬೈಲ್​ ಸಂಖ್ಯೆಯನ್ನ ನೀಡಬೇಕು
3. ಮಗುವಿನ ಛಾಯಾಚಿತ್ರವನ್ನು ದಾಖಲಾತಿ ಕೇಂದ್ರದಲ್ಲಿ ತೆಗೆದುಕೊಳ್ಳಲಾಗುತ್ತೆ.
4. ಮಗುವಿನ ಆಧಾರ್​ ಕಾರ್ಡ್ ಸಂಖ್ಯೆಯನ್ನು, ಪೋಷಕರ ಆಧಾರ್​ ಕಾರ್ಡ್ ಸಂಖ್ಯೆಗೆ ಲಿಂಕ್​ ಮಾಡಲಾಗುತ್ತೆ
5. ಇದೆಲ್ಲ ವಿಧಾನಗಳನ್ನ ಮುಗಿಸಿದ ಬಳಿಕ, ಮರೆಯದೆ ಸ್ವೀಕೃತಿ ಸ್ಲಿಪ್​ ಅನ್ನು ತೆಗೆದುಕೊಳ್ಳಿ
ಆನ್​ಲೈನ್​ನಲ್ಲಿ ಅಪಡೇಟ್​​ ಮಾಡುವುದು ಹೇಗೆ?

: ಟೆನ್ಷನ್ ಬೇಡ... 5 ನಿಮಿಷದೊಳಗೆ ಶೇ. 80ರಷ್ಟು ಚಾರ್ಜ್‌ ಆಗುತ್ತೆ ಎಲೆಕ್ಟ್ರಿಕ್‌ ವಾಹನಗಳು!

ಬಾಲ ಆಧಾರ್ ಕಾರ್ಡ್ ಅವಧಿ ಮುಗಿದ ನಂತರ ಪೋಷಕರು ಬಯೋಮೆಟ್ರಿಕ್​ ಡೇಟಾವನ್ನು ಅಪಡೇಟ್​ ಮಾಡಬೇಕೆಂದು ಯುಐಡಿಎಐ ಆದೇಶಿಸಿದೆ. ಮಗುವಿಗೆ 5 ವರ್ಷ ತುಂಬಿದ ಬಳಿಕ ಬ್ಲೂ ಕಲರ್​ ಅಥವಾ ಬಾಲ ಆಧಾರ್ ಕಾರ್ಡ್ ಅಮಾನ್ಯವಾಗುತ್ತೆ. ​ಅದನ್ನು ಪುನಃ ಸಕ್ರಿಯಗೊಳಿಸಲು ಕಡ್ಡಾಯ ಬಯೋಮೆಟ್ರಿಕ್​ ಅಪಡೇಟ್​ ಅಗತ್ಯವಿರುತ್ತೆ. ಯುಐಡಿಎಐನ ಅಧಿಕೃತ ವೆಬ್​ಸೈಟ್​ಗೆ ತೆರಳಿ ಬಯೋಮೆಟ್ರಿಕ್​ ಡೇಟಾವನ್ನು ನವೀಕರಿಸಲು ಅಪಾಯಿಂಟ್​ಮೆಂಟ್ ಬುಕ್​ ಮಾಡಬಹುದು. ಇದಾದ ಕೆಲ ದಿನಗಳ ಬಳಿಕ , ಮಗುವಿಗೆ ವಯಸ್ಕರಂತೆ ಸಾಮನ್ಯ ಆಧಾರ್​ ಕಾರ್ಡ್​ ನೀಡಲಾಗುತ್ತೆ