ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದ್ರೆ ಕಾನೂನು ಕ್ರಮ – ಸಿಎಂ ಬೊಮ್ಮಾಯಿ

ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದ್ರೆ ಕಾನೂನು ಕ್ರಮ – ಸಿಎಂ ಬೊಮ್ಮಾಯಿ

 ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರೋದು ಬೇಡಾ ಎಂದು ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳ ಮೂಲಕ ಮಹಾರಾಷ್ಟ್ರದ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ತಿಳಿಸಲಾಗಿದೆ. ಅದಾಗ್ಯೂ ಅವರು ಬೆಳಗಾವಿಗೆ ಬರೋ ಸಾಹಸ ಮಾಡಿದರೇ ನಮ್ಮ ಅಧಿಕಾರಿಗಳು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. 
 ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈಗಿರೋ ವಾತಾವರಣದಲ್ಲಿ ಬೆಳಗಾವಿಗೆ ಸಚಿವರು ಬರೋದು ಬೇಡಾ, ಇಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಆಗತ್ತೆ. ಹೀಗಾಗಿ ಬರೋದು ಉಚಿತ ಅಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೂ ಅವರು ಬರ್ತೀನಿ ಅನ್ನೋದು ಸರಿಯಾದ ಕ್ರಮ ಅಲ್ಲ ಎಂದರು.
 ಮಹಾರಾಷ್ಟ್ರ ಕರ್ನಾಟಕ  ಜನರ  ನಡುವೆ ಸಾಮರಸ್ಯ ಇದೆ. ಇದೇ ಸಂದರ್ಭದಲ್ಲಿ ಗಡಿ ವಿವಾದ ಕೂಡ ಇದೆ. ಗಡಿವಿವಾದ ಕರ್ನಾಟಕದ ಪ್ರಕಾರ ಮುಗಿದು ಹೋಗಿರೋ ಅಧ್ಯಾಯ. ಆದ್ರೆ ಮಹಾರಾಷ್ಟ್ರ ಪದೇ ಪದೇ ಖ್ಯಾತೆ ತೆಗೆದು ,ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮಹಾರಾಷ್ಟ್ರದ ಸಚಿವರು ರಾಜ್ಯಕ್ಕೆ ಬರೋ ಸಾಹಸ ಮಾಡಿದ್ದಾರೆ. ಅಧಿಕಾರಿಗಳು ಕ್ರಮ ಕೈಗೊಳ್ತಾರೆ. ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
 ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ
ಪ್ರತಿಭಂದಕ ಕಾಯ್ದೆ ಜಾರಿ ಮಾಡೋ ವಿಚಾರವಾಗಿ ಮಾತನಾಡಿದ ಸಿಎಂ, ಹಿಂದೆ ಈ ತರಹ ಆದಗೆಲ್ಲಾ ಸರ್ಕಾರ ಯಾವ ಕ್ರಮ ಕೈಗೊಂಡಿದೆ, ಅದೆಲ್ಲಾ ಕ್ರಮ ಕೈಗೊಳ್ತೀವಿ ಎಂದರು. ಇನ್ನು ರಾಜ್ಯದಲ್ಲಿ ಕೇಸರಿ ಶಾಲೆ ವಿಚಾರವಾಗಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿ, ನಾನು ಈ ಬಗ್ಗೆ ಚರ್ಚೆ ಮಾಡೋಕೆ ಹೋಗಲ್ಲ. ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡೋದು ನಮ್ಮ ಲಕ್ಷ್ಯ ಇದೆ ಎಂದು ಸ್ಪಷ್ಟನೆ ನೀಡಿದರು.