ದೇಶದಲ್ಲಿ ಇದೇ ಮೊದಲ ಬಾರಿಗೆ "ರ‍್ಯಾಪಿಡ್ ರಸ್ತೆ" ಬೆಂಗಳೂರಲ್ಲಿ
ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ಮಾದರಿಗಳ ಬಳಿಕ ಬೆಂಗಳೂರಲ್ಲಿ ಈಗ ರ್ಯಾಪಿಡ್ ರಸ್ತೆಯ ನಿರ್ಮಾಣ ಆಗ್ತಿದೆ. ದೇಶದಲ್ಲಿ ಇದೇ ಮೊದಲು, ಈ ತಂತ್ರಜ್ಞಾನದ ರಸ್ತೆ ನಿರ್ಮಾಣ ಮಾಡಲಾಗ್ತಿದೆ ಎಂದು ಬಿಬಿಎಂಪಿ ಹೇಳಿದೆ. ಅಂದಹಾಗೆ ಈ ರಸ್ತೆ ನಿರ್ಮಾಣ ಆಗ್ತಿರೋದು, ನಗರದ ಹಳೆ ಮದ್ರಾಸ್ ರಸ್ತೆಯ ಹೊಸ ಬಿನ್ನಮಂಗಲ ವೃತ್ತದ ಬಳಿ. ವಿನೂತನ ತಂತ್ರಾಜ್ಞಾನದೊಂದಿಗೆ 500 ಮೀಟರ್ ಉದ್ದದ ರಸ್ತೆಯಲ್ಲಿ ಪ್ರಾಯೋಗಿಕವಾಗಿ ರ‍್ಯಾಪಿಡ್ ರಸ್ತೆ(ಫ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್‌ಮೆಂಟ್)ಯನ್ನು ನಿರ್ಮಾಣ ಮಾಡಲಾಗುತ್ತಿದೆ.