ಪುನೀತ್ ಕಣ್ಣಿನಿಂದ ಇನ್ನೂ 11 ಜನಕ್ಕೆ ದೃಷ್ಟಿ ನೀಡುವ ಪ್ರಯತ್ನ

ಪುನೀತ್ ರಾಜ್‌ಕುಮಾರ್ ಅವರನ್ನು ನಮ್ಮನ್ನು ದೈಹಿಕವಾಗಿ ಬಿಟ್ಟು ಹೋಗಿದ್ದಾರೆ.
ಹೌದು, ಪುನೀತ್ ಅವರ ಕಣ್ಣಿನಿಂದ ಸ್ಟೆಮ್ ಸೆಲ್ (ಕಣ್ಣಿನ ರಿಮ್ ಭಾಗದಿಂದ ) ಗಳನ್ನು ಪ್ರಯೋಗಲಾಯದಲ್ಲಿ, ಕಸಿ ಮಾಡಲು ನಾರಾಯಣ ನೇತ್ರಾಲಯ ವೈದ್ಯರು ಮುಂದಾಗಿದ್ದು, ಈ ಪ್ರಯೋಗ ಮಲ್ಟಿಪಲ್ ಆಗಲು ಇನ್ನೂ ಕೆಲವು ದಿನಗಳು ಬೇಕಾಗುತ್ತದೆ. ಹೀಗಾಗಿ ಕನ್ನಡಿಗರ ಮುದ್ದಿನ ಅಪ್ಪು, ಕನ್ನಡ ನಾಡನ್ನು ಮತ್ತೊಬ್ಬರ ಕಣ್ಣಿನಲ್ಲಿ ನೋಡಲಿದ್ದು, ಮತ್ತೆ ಕನ್ನಡ ನಾಡಿನಲ್ಲಿ ಅಭಿಮಾನಿ ದೇವರುಗಳ ಕಣ್ಣಿನಲ್ಲಿ ನಾಡನ್ನು ನೋಡಲಿದ್ದಾರೆ.
ಪಟಾಕಿ ಸಿಡಿತದಿಂದ ದೃಷ್ಟಿ ಹಾನಿಯಾಗಿದ್ದರೆ ನಿವಾರಿಸಲು ಸ್ಟೆಮ್ ಸೆಲ್ ಚಿಕಿತ್ಸೆಯು ಉತ್ತಮವಾಗಿದೆ. ಉದಾಹರಣೆಗೆ ರೆಟಿನಲ್ ಪಿಗ್ಮೆಂಟ್ ಎಪಿಥೇಲಿಯಲ್ (RPE) ಕೋಶಗಳು. ಕಣ್ಣಿನ ಕಾಯಿಲೆಯಿಂದಾಗಿ ಹಾನಿಗೊಳಗಾದ ಅಥವಾ ಕಳೆದುಹೋದ ಜೀವಕೋಶಗಳನ್ನು ಬದಲಿಸಲು ಹೊಸ RPE ಕೋಶಗಳನ್ನು ಮತ್ತೆ ಕಣ್ಣಿನೊಳಗೆ ಚುಚ್ಚಲಾಗುತ್ತದೆ