ಕೇರಳ: ಪೊಲೀಸಪ್ಪನ ಕಿವಿ ಕಚ್ಚಿದ ಕುಡುಕ!. ಮುಂದೇನಾಯ್ತು ನೋಡಿ!

ಕೇರಳ: ಪೊಲೀಸಪ್ಪನ ಕಿವಿ ಕಚ್ಚಿದ ಕುಡುಕ!. ಮುಂದೇನಾಯ್ತು ನೋಡಿ!

ಕೇರಳ: ಕೇರಳದ ಕಾಸರಗೋಡಿನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ವ್ಯಕ್ತಿಯೊಬ್ಬ ಪೊಲೀಸ್‌ ಅಧಿಕಾರಿಯೊಬ್ಬರ ಕಿವಿ ಕಚ್ಚಿದ ಘಟನೆ ನಡೆದಿದೆ.

ಆರೋಪಿಯು ಮದ್ಯ ಕುಡಿದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಪೊಲೀಸರೊಬ್ಬರ 'ಬಲ ಕಿವಿ' ಕಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಸ್ಟ್ಯಾನಿ ರಾಡ್ರಿಕ್ಸ್ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನ ಅಪಘಾತದಲ್ಲಿ ಸಿಲುಕಿದ ರಾಡ್ರಿಕ್ಸ್‌ಗೆ ಪೊಲೀಸರು ಬೈದಿದ್ದಾರೆ. ಇದರಿಂದ ಕುಡಿದು ಫುಲ್‌ ಟೈಟ್‌ ಆಗಿದ್ದ ರಾಡ್ರಿಕ್ಸ್‌ ರಸ್ತೆಯಲ್ಲೇ ರಂಪಾಟ ಮಾಡಿದ್ದಾನೆ. ಇದರಿಂದ ಕೋಪಗೊಂಡ ಪೊಲೀಸ್ ತಂಡವು ರಾಡ್ರಿಕ್ಸ್‌ಅನ್ನು ಠಾಣೆಗೆ ಕರೆದೊಯ್ಯಲು ನಿರ್ಧರಿಸಿತು.

ಪೊಲೀಸ್ ಠಾಣೆಗೆ ಕರೆದೊಯ್ಯುವಾಗ, ಕೋಪದ ಭರದಲ್ಲಿ ರಾಡ್ರಿಕ್ಸ್‌ ಸಬ್ ಇನ್ಸ್‌ಪೆಕ್ಟರ್ ವಿಷ್ಣುನಾಥ್ ಅವರ ಬಲ ಕಿವಿಯನ್ನು ಕಚ್ಚಿದ್ದಾನೆ. ಈ ವೇಳೆ, ಅಧಿಕಾರಿಯ ಕಿವಿಯಲ್ಲಿ ರಕ್ತ ಬರಲು ಪ್ರಾರಂಭಿಸಿದ್ದು, ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮದ್ಯ ಸೇವಿಸಿ ಅನಾಹುತ ಸೃಷ್ಟಿಸಿದ ಹಾಗೂ ಕೆಲವು ಪ್ರಕರಣಗಳನ್ನು ಹೊಂದಿದ್ದ ರಾಡ್ರಿಕ್ಸ್‌ನನ್ನು ಬಂಧಿಸಲಾಗಿದೆ.