ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ನೀಡುವ ಧನ ಸಹಾಯ: ₹ 2 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಳ
ಬೆಂಗಳೂರು: ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ನೀಡುವ 'ಧನಸಹಾಯ'ಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೆಲ ನಿರ್ಬಂಧ ಗಳನ್ನು ಕೈಬಿಟ್ಟಿದೆ. ಸಂಸ್ಥೆಯೊಂದಕ್ಕೆ ನೀಡುವ ಗರಿಷ್ಠ ಅನುದಾನದ ಮಿತಿಯನ್ನು ₹ 2 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.
ಈ ಬಗ್ಗೆ ಇಲಾಖೆ ಆದೇಶ ಹೊರಡಿಸಿದೆ. ಇಲಾಖೆಯು ವಿಧಿಸಿದ ನಿರ್ಬಂಧಗಳ ಬಗ್ಗೆ ಕಳೆದ ನ. 27ರಂದು 'ಧನಸಹಾಯಕ್ಕೆ ಕಾರ್ಯಕ್ರಮದ ನಿರ್ಬಂಧ' ಎಂಬ ಶೀರ್ಷಿಕೆಯಡಿ 'ಪ್ರಜಾವಾಣಿ' ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಕಲಾವಿದರು ಹಾಗೂ ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಪ್ರಮುಖರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದ್ದರು. ಈಗ ಧನಸಹಾಯಕ್ಕೆ ಸಂಬಂಧಿಸಿದ ನಿಯಮಗಳನ್ನು ಇಲಾಖೆ ಪರಿಷ್ಕರಿಸಿದೆ.