ಪ್ರತಿ ಟನ್ ಕಬ್ಬಿಗೆ ೨,೪೦೦ ರೂ. ನೀಡಲು ಆಗ್ರಹಿಸಿ ರೈತರ ಧರಣಿ | Bidar |
ಪ್ರತಿ ಟನ್ ಕಬ್ಬಿಗೆ ೨,೪೦೦ ರೂ. ನೀಡುವಂತೆ ಆಗ್ರಹಿಸಿ ಬೀದರ್ನಲ್ಲಿ ಇಂದಿನಿಂದ ರೈತರು ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದಾರೆ. ರೈತ ಮುಖಂಡ ದಯಾನಂದ ಸ್ವಾಮಿ ನೇತೃತ್ವದಲ್ಲಿ ರೈತರು ಧರಣಿ ನಡೆಸಲಿದ್ದಾರೆ. ಅಂಬೇಡ್ಕರ್ ವೃತ್ತದ ಬಳಿಯಿರುವ ಸಚಿವ ಪ್ರಭು ಚೌವ್ಹಾನ್ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ. ಈಗ ಪ್ರತಿ ಟನ್ ಕಬ್ಬಿಗೆ ೧,೯೫೦ ರೂಪಾಯಿ ಮಾತ್ರ ಕೊಡಲಾಗುತ್ತಿದೆ. ಇದನ್ನು ಹೆಚ್ಚಿಸಿ ೨೪೦೦ ರೂಪಾಯಿ ಕೊಡುವಂತೆ ರೈತರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಹತ್ತಾರು ಬಾರಿ ರೈತರು ಕಾರ್ಖಾನೆಗಳ ಮಾಲೀಕರ ಜೊತೆ ಚರ್ಚೆ ನಡೆಸಿದ್ದಾರೆ. ಆದರೂ ರೈತರಿಗೆ ೨,೪೦೦ ರೂಪಾಯಿ ಕೊಡಲು ಕಾರ್ಖಾನೆಗಳು ನಿರಾಕರಿಸಿರುವುದರಿಂದ ಪ್ರತಿಭಟನೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.