ಉಡುಪಿ ಹದಗೆಟ್ಟ ರಸ್ತೆ ಸಂಚಕಾರ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ೩ ಮತ್ತು ೪ ವಾರ್ಡಿನಲ್ಲಿ ರಸ್ತೆಕರಣ ಡಾಂಬರೀಕರಣಗೊAಡಿದ್ದು, ದೊಡ್ಡ ದೊಡ್ಡ ಹೊಂಡ ಬಿದಿದೆ. ಕೃಷಿ ಗದ್ದೆಯಲ್ಲಿ ನಡೆಯುತ್ತಿದ್ದೇವೋ ಇಲ್ಲ ರಸ್ತೆಯಲ್ಲಿ ಹೋಗುತ್ತಿದ್ದೆವೋ ಎಂಬ ಅನುಮಾನ ಜನರಲ್ಲಿ ಕಾಡಿದೆ. ೨೦ ವರ್ಷ ಕಳೆದರೂ ದುರಸ್ಥಿಯಾಗದಿದ್ದರಿಂದ ವಾಹನ ಸವಾರರು ರಸ್ತೆಯಲ್ಲಿ ಸಂಚಾರಿಸಲು ಹರಸಾಹಸ ಪಡುವಂತಾಗಿದೆ. ಅದರಲ್ಲಿ ಸ್ಥಳೀಯ ಶಾಸಕರ ಬೆಂಬಲಿಗರು ಕಳೆದ ಒಂದು ವರ್ಷದ ಹಿಂದೆ ರಸ್ತೆ ಕಾಮಗಾರಿಗೆ ೯೦ ಲಕ್ಷ ಹಣವನ್ನು ಶಾಸಕರಿಂದ ಮಂಜೂರು ಮಾಡಿದ್ದಾರೆ. ಇದು ರಾಷ್ಟ್ರೀಯ ಹೆದ್ದಾರಿ ೬೬ ರ ರಸ್ತೆಗೆ ತಾಗಿಕೊಂಡಿರುವ ಈ ರಸ್ತೆ ಹಲವು ಗ್ರಾಮಗಳಿಗೆ ಕಲ್ಪಿಸುವ ರಸ್ತೆಯ ದುಸ್ಥಿತಿ. ಬಿಜೂರು, ತಗ್ಗರ್ಸೆ, ಮೂರ್ಗೂಳಿ ಹಕ್ಲು ಗ್ರಾಮಗಳ ಜನರು ದಿನ ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಇನ್ನು ರೈತರು ತಮ್ಮ ಜಮೀನುಗಳಿಗೆ ಇದೇ ರಸ್ತೆಯಲ್ಲಿ ಲಾರಿ, ರಿಕ್ಷಾ ದ್ವಿಚಕ್ರವಾಹನ ಸವಾರರು, ಸೈಕಲ್ ಸವಾರರು ಸಂಚರಿಸುತ್ತಾರೆ. ಆದರೆ ಮೂಲ ಸೌಕರ್ಯಗಳಲ್ಲಿ ಒಂದಾದ ಸುಗಮ ರಸ್ತೆ ಸಂಚಾರ ವ್ಯವಸ್ಥೆ ಕಳೆದ ಇಪ್ಪತ್ತು ವರ್ಷಗಳಿಂದ ದರಸ್ತಿ ಕಾರ್ಯ ಎನ್ನುವುದು ಮರೀಚಿಕೆಯಾಗೇ ಉಳಿದಿದೆ.