ವಾರಣಾಸಿ ಪ್ರವಾಸದ ಕುರಿತು ಪೂರ್ವಭಾವಿ ಸಭೆ
ದಿನಾಂಕ:16.11.2021ರ ಮoಗಳವಾರದಂದು ವಿಧಾಸಸೌಧದಲ್ಲಿ ರಾಜ್ಯ ರೇಷ್ಮೆ ಸಚಿವರಾದ ಶ್ರೀ ಕೆ. ನಾರಾಯಣಗೌಡ ರವರ ಜೊತೆಯಲ್ಲಿ ಹಮ್ಮಿಕೊಂಡಿರುವ ವಾರಣಾಸಿ ಪ್ರವಾಸದ ಕುರಿತು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಅಮರಶೆಟ್ಟಿ ರವರು, ಕರ್ನಾಟಕ ಕೈಗಾರಿಕಾ ಉದ್ಯಮಗಳ ನಿಗಮದ ಅಧ್ಯಕ್ಷರಾದ ಶ್ರೀ ಎಸ್.ಆರ್.ಗೌಡರವರು ಮತ್ತು ರೇಷ್ಮೆ ಸಚಿವರ ಆಪ್ತ ಕಾರ್ಯದರ್ಶಿಯವರಾದ ಶ್ರೀ ಪ್ರಭಾಕರ್ ರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಅನುರಾಧ, ಐ.ಎ.ಎಸ್ ರವರು ಮತ್ತು ಮಂಡಳಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಿಶ್ವನಾಥ್ ರವರು ಉಪಸ್ಥಿತರಿದ್ದರು.