ಯೂತ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ರವೀನಾ, ಭಾರತಕ್ಕೆ ಒಟ್ಟು11 ಪದಕಗಳು

ಹಾಲಿ ಏಷ್ಯನ್ ಯೂತ್ ಚಾಂಪಿಯನ್ ರವೀನಾ ಅವರು ಯೂತ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಪುರುಷರ ಮತ್ತು ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ 2022 ರಲ್ಲಿ ಭಾರತಕ್ಕೆ ಒಟ್ಟು 11 ಪದಕಗಳು ಲಭಿಸಿದಂತಾಗಿದೆ. ರವೀನಾ (63 ಕೆಜಿ), ದೇವಿಕಾ ಘೋರ್ಪಡೆ (52 ಕೆಜಿ) ಚಿನ್ನ ಗೆದ್ದರೆ, ಕೀರ್ತಿ (81 + ಕೆಜಿ), ಭಾವನಾ ಶರ್ಮಾ (48 ಕೆಜಿ) ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಮುಸ್ಕಾನ್ (75 ಕೆಜಿ), ಲಶು ಯಾದವ್ (70 ಕೆಜಿ), ಕುಂಜರಾಣಿ ದೇವಿ ತೊಂಗಮ್ (60 ಕೆಜಿ) ಮತ್ತು ತಮನ್ನಾ (50 ಕೆಜಿ) ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.