ಜಿಲ್ಲಾಧಿಕಾರಿಯಿಂದ ಗ್ಯಆರೆಂಟಿ ಪತ್ರ ಪಡೆದು ಲಸಿಕೆ ಹಾಕಿಸಿಕೊಂಡ ವ್ಯಕ್ತಿ | Hubli | Covid19 | HDMC |
ಜಿಲ್ಲಾಧಿಕಾರಿಗೆ ಲಸಿಕೆ ಬಗ್ಗೆ ಗ್ಯಾರೆಂಟಿ ಕೇಳಿ, ನನಗೇನು ಆಗವುದಿಲ್ಲವೆಂದು ಬರೆದು ಕೊಡಿ. ಆಗ ಲಸಿಕೆ ಹಾಕಿಸಿಕೊಳ್ತೇನೆ ಎಂದು ವ್ಯಕ್ತಿಯೊಬ್ಬ ಉದ್ಧಟತನ ತೋರಿದ ಘಟನೆ ಹುಬ್ಬಳ್ಳಿ ಪಾಲಿಕೆ ಆವರಣದಲ್ಲಿನ ಸಭೆಯಲ್ಲಿ ನಡೆದಿದೆ. ಈ ರೀತಿಯಾಗಿ ಉದ್ಧಟತನ ತೋರಿದ ವ್ಯಕ್ತಿಯೇ ಆನಂದ ಕುಂದನೂರು. ಕೂಡಲೆ ಬರೆದುಕೊಂಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು ನಾನು ಸಹಿ ಮಾಡಿಕೊಡ್ತೇನೆ. ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಮನವೊಲಿಸಿ ವ್ಯಕ್ತಿಗೆ ಗ್ಯಾರೆಂಟಿ ಪತ್ರ ಬರೆದುಕೊಟ್ಟು ಸಭೆಯಲ್ಲೇ ವ್ಯಕ್ತಿಗೆ ಲಸಿಕೆ ಹಾಕಿಸಿದ್ದಾರೆ.