ಅಂಬೇಡ್ಕರ್ ಮೂರ್ತಿಗೆ ಅವಮಾನ : ಆಕ್ರೋಶ |Shiggaon|

ಶಿಗ್ಗಾಂವಿ ಪಟ್ಟಣದ ಪುರಸಭೆಯಲ್ಲಿ ಮಹತ್ವಪೂರ್ಣ ಪರಿನಿರ್ವಾಣ ದಿನದಂದು ಅಂಬೇಡ್ಕರ್ ಮೂರ್ತಿಗೆ ಗೌರವಿಸದೇ ಅವಮಾನಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ಜರುಗಿತು. ಅಂಬೇಡ್ಕರ್ ಅವರ ಮೂರ್ತಿ ಸ್ವಚ್ಛತೆಗೊಳಿಸದೆ ಧೂಳಿನಿಂದ ಆವರಿಸಿರುವುದನ್ನು ಜೊತೆಗೆ ಮೂರ್ತಿ ಒಂದು ಕೊಠಡಿಯ ಮೂಲೆಯಲ್ಲಿ ವಿವಿಧ ವಸ್ತುಗಳನ್ನು ಇಟ್ಟು ಮೂರ್ತಿ ಕಾಣದಂತೆ ಮಾಡಿ ಅವಮಾನ ಮಾಡಿ ಅಗೌರವ ತೋರಿದ್ದಾರೆ ಎಂದು ಉತ್ತರ ಕರ್ನಾಟಕ ರಕ್ಷಣಾ ವೇದಿಕೆಯ ಮತ್ತು ನ್ಯಾಯವಾದಿ ರಾಜ್ಯಾಧ್ಯಕ್ಷ ಹನುಮಂತ ಬಂಡಿವಡ್ಡರ ಖಂಡಿಸಿ ಕೂಡಲೇ ಪುರಸಭೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಎಸ್.ಎಸ್.ಶಿವಳ್ಳಿ, ಬಸುವರಾಜ ಬಂಡಿವಡ್ಡರ, ರಮೇಶ ಚೌವ್ಹಾನ್ ಸೇರಿದಂತೆ ಮುಖಂಡರು ಅಭಿಮಾನಿಗಳು ಉಪಸ್ಥಿತರಿದ್ದರು.