ತಾಲಿಬಾನ್ ಅಟ್ಯಾಕ್ ! ಅತಂತ್ರರಾದ ಧಾರವಾಡದ ಅಫ್ಘಾನ್ ವಿದ್ಯಾರ್ಥಿಗಳು.. | Dharwad |
ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲಗೆ ಲಗ್ಗೆ ಇಡುವುದರೊಂದಿಗೆ ಆ ದೇಶ ಉಗ್ರಗಾಮಿಗಳ ತೆಕ್ಕೆಗೆ ಜಾರಿದೆ. ಅಲ್ಲೀಗ್ ಪ್ರಜಾಪ್ರಭುತ್ವ ಸರ್ಕಾರ ಪತನ ಗೊಂಡಿದ್ದು ತಾಲಿಬಾನ್ ಆಳ್ವಿಕೆಗೆ ಕ್ಷಣ ಗಣನೆ ಆರಂಭವಾಗಿದೆ. ಭಯ ಬೀತರಾದ ಅಲ್ಲಿನ ಜನ ತಮ್ಮ ಪ್ರಾಣ ಉಳಿಸಿಕೊಳ್ಳಲು ದೇಶ ತೊರೆಯಲು ಹರ ಸಾಹಸ ಪಡುತ್ತಿರುವ ದ್ರಶ್ಯಗಳು ಒಂದೆಡೆಯಾದರೆ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಆಫಘಾನಿಸ್ಥಾನ ದೇಶದ ವಿದ್ಯಾರ್ಥಿಗಳ ಪರಿಸ್ಥಿತಿ ಕೂಡ ಭಿನ್ನಾವಾಗಿಲ್ಲ. ಇವರೆಲ್ಲ ಆಫಘಾನಿಸ್ಥಾನ ಸರ್ಕಾರದ ಪರವಾಗಿ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಗಮಿಸಿದವರು. ಭಯೋತ್ಪಾದನೆ ಸಂಘಟನೆಯೊಂದು ಸ್ಥಾಪಿತ ಸರ್ಕಾರದ ವಿರುದ್ಧ ಯುದ್ಧ ನಡೆಸಿ ಒಂದು ರಾಷ್ಟ್ರವನ್ನು ತನ್ನ ಕಪಿ ಮುಷ್ಠಿಗೆ ತೆಗೆದುಕೊಂಡಿರುವುದು ಇವರನ್ನು ಕಂಗೆಡಿಸಿದೆ. ಅವರ ಕಣ್ಣಲ್ಲಿ ದುಃಖದ ಭಾಷ್ಪಗಳು ಕಂಡು ಬಂದವು. ಅವರು ಎಷ್ಟರ ಮಟ್ಟಿಗೆ ಹೆದರಿದ್ದಾರೆ ಅಂದ್ರೆ ಬಾಯಿಯಿಂದ ಮಾತು ಕೂಡ ಬರ್ತಾಯಿಲ್ಲ. ತನ್ನ ತಾಯ್ನಾಡಿನಲ್ಲಿರುವ ಕುಟುಂಬ ಸದಸ್ಯರು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಅನ್ನೋದನ್ನ ತಿಳಿದುಕೊಳ್ಳಲು ಪಡತಿರುವ ಕಷ್ಟ ಅಷ್ಟಿಷ್ಟಲ್ಲ. ಒಂದು ಕಡೆ ಇಡೀ ಜಗತ್ತು ಭಯೋತ್ಪಾದನೆ ವಿರುದ್ಧ ಸಮರ ಸಾರುತ್ತಿದೆ. ಬ್ರಹತ್ ಸೇನಾಪಡೆ , ಕೋಟ್ಯಂತರ ಯೋಧರು, ಮುಂದುವರೆದ ರಕ್ಷಣಾ ತಂತ್ರಜ್ಞಾನ ಇವೆಲ್ಲವನ್ನೂ ಸಿದ್ಧ ಪಡಿಸಿಕೊಂಡಿರುವ ಶಕ್ತಿಶಾಲಿ ರಾಷ್ಟ್ರಗಳು ತಾಲಿಬಾನನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿರುವುದು ದುರ್ದೈವದ ಸಂಗತಿ.