ವರ್ಚುವಲ್ ಮೂಲಕ ನೂತನ `ಹಾವೇರಿ ವಿವಿ' ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ವರ್ಚುವಲ್ ಮೂಲಕ ನೂತನ `ಹಾವೇರಿ ವಿವಿ' ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು : ಹಾವೇರಿ ಜಿಲ್ಲೆಯ ಕೆರಿಮತ್ತಿಹಳ್ಳಿಯಲ್ಲಿ ಹಾವೇರಿ ವಿಶ್ವವಿದ್ಯಾಲಯವನ್ನು ಇಂದು ವರ್ಚುವಲ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ.

ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿವಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಹಾವೇರಿಯ ಕೆರಿಮತ್ತಿಹಳ್ಳಿಯಲ್ಲಿ ನೂತನ ಹಾವೇರಿ ವಿವಿ ಉದ್ಘಾಟಿಸಲಾಗಿದ್ದು, ಉನ್ನತ ವಿದ್ಯಾಭ್ಯಾಸ ಮಾಡುವ ವಿನೂತನ ಕೋರ್ಸ್ ಗಳ ಆರಂಭ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ವೇಳೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆ ಮೇಲಿರುತ್ತದೆ. ಒಬ್ಬ ಮುತ್ಸದ್ಧಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಅಶ್ವತ್ಥನಾರಾಯಣ ಉತ್ತಮ ಕೆಲಸ ಮಾಡಿದ್ದಾರೆ. ಅಶ್ವತ್ಥ ನಾರಾಯಣ ಕಾರಿಗೆ ಫಸ್ಟ್, ಸೆಕೆಂಡ್ ಗೇರ್ ಇಲ್ಲ. ಏನಿದ್ರೂ ಟಾಪ್ ಗೇರ್ ಎಂದು ಅಶ್ವತ್ಥ ನಾರಾಯಣ ಹಾಡಿಹೊಗಳಿದ್ದಾರೆ.