ಕಳೆದ 7 ವರ್ಷಗಳಲ್ಲಿ ಒಂದೇ ಒಂದು ಭಯೋತ್ಪಾದನೆ ಕೃತ್ಯ ನಡೆದಿಲ್ಲ

ಕಳೆದ 7 ವರ್ಷಗಳಲ್ಲಿ ಒಂದೇ ಒಂದು ಭಯೋತ್ಪಾದನೆ ಕೃತ್ಯ ನಡೆದಿಲ್ಲ

ನವದೆಹಲಿ, ;ಕಳೆದ ಏಳು ವರ್ಷಗಳಲ್ಲಿ ದೇಶದ ಒಳಗೆ ಒಂದೇ ಒಂದು ಭಯೋತ್ಪಾದನೆ ಚಟುವಟಿಕೆಗೆ ನಮ್ಮ ರಕ್ಷಣಾ ಸಿಬ್ಬಂದಿಗಳು ಅವಕಾಶ ನೀಡಲಿಲ್ಲ. ಹಾಗೆಯೇ ನಕ್ಷಲಿ ಚಟುವಟಿಕೆಯನ್ನು ಬಹುತೇಕ ಹತ್ತಿಕ್ಕಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಬಲರಾಮ್‍ಜಿದಾಸ್ ಟಂಡನ್ ಅವರ ಸ್ಮರಣಾರ್ಥ ರಾಷ್ಟ್ರೀಯ ಭದ್ರತೆಯ ವಿಚಾರಣ ಸಂಕಿರಣ ಸರಣಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಬಾಹ್ಯ, ಆಂತರಿಕ ಹಾಗೂ ರಾಜತಾಂತ್ರಿಕ ದೃಷ್ಟಿಕೋನದಿಂದ ಭಾರತ ತನ್ನ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಮತ್ತು ಬಲ ಪಡಿಸಿಕೊಳ್ಳುವ ಕಾರ್ಯದಲ್ಲಿ ಸಫಲವಾಗಿದ್ದೇವೆ. ಪ್ರತಿಯೊಂದು ರಂಗದಲ್ಲೂ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ರಕ್ಷಣಾ ಕ್ಷೇತ್ರದಲ್ಲಿ ಕ್ರಾಂತಿಕ ಬದಲಾವಣೆ ತರಲಾಗುತ್ತಿದೆ. ಥಿಯೇಟರ್ ಕಮಾಂಡ್ ರೀತಿಯಲ್ಲಿ ಹೊಸ ವ್ಯವಸ್ಥೆ ರೂಪಿಸಲಾಗುತ್ತಿದ್ದು, ಇದು ಮಹತ್ವದ ಬೆಳವಣಿಗೆಯಾಗಿದೆ. ದೇಶ ರಕ್ಷಣಗೆ ಅಗತ್ಯಾದ ಸುಮಾರು 200ಕ್ಕೂ ಹೆಚ್ಚು ವಸ್ತುಗಳನ್ನು ಆಮದು ಮಾಡಿಕೊಳ್ಳುವ ಬದಲು ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಹಣ ಕೂಡ ನಿಗದಿ ಮಾಡಲಾಗಿದೆ. ರಕ್ಷಣಾ ಸಾಮಗ್ರಿಗಳಲ್ಲಿ ಸ್ವಾವಲಂಬನೆ ಸಾಧಿಸಿದಾಗ ರಾಷ್ಟ್ರೀಯ ಭದ್ರತೆಯೂ ಬಲಗೊಳ್ಳುತ್ತದೆ ಎಂದರು.ರಕ್ಷಣಾ ಸೇನೆಗೆಂದು ರಫೈಲ್‍ನಂತಹ ಅತ್ಯಾಧುನಿಕ ಯುದ್ಧ ವಿಮಾನಗಳು ಸೇರ್ಪಡೆಯಾಗಿವೆ. ಗಡಿಯಾಗಿ ಯಾವುದೇ ಸವಾಲುಗಳು ಎದುರಾದರೂ ಅದನ್ನು ಎದುರಿಸಲು ನಾವು ಸಮರ್ಥರಿದ್ದೇವೆ. ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ. ಆಧುನಿಕ ಶಸ್ತ್ರಾಸ್ತ್ರ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.