ಮೂಡಿಗೆರೆಯಲ್ಲಿ ಮುಂದುವರೆದ 'ಕಾಡಾನೆ' ಸೆರೆ ಕಾರ್ಯಾಚರಣೆ : 'ಡ್ರೋನ್' ಕ್ಯಾಮೆರಾ ಬಳಕೆ

ಮೂಡಿಗೆರೆ : ಮೂಡಿಗೆರೆಯಲ್ಲಿ ಇಂದು ಮೂರನೇ ದಿನ ಕೂಡ 'ಕಾಡಾನೆ' ಸೆರೆ ಕಾರ್ಯಾಚರಣೆ ಮುಂದುವರೆದಿದ್ದು, ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಡ್ರೋನ್ ಕ್ಯಾಮೆರಾ ಬಳಕೆ ಮಾಡಿದ್ದಾರೆ.
ಇಂದು ಗುರುವಾರ ಕುಂದೂರು, ತಳವಾರ, ದೊಡ್ಡಹಳ್ಳ ಭಾಗದಲ್ಲಿ ಆನೆ ಹಿಡಿಯಲು ಕಾರ್ಯಾಚರಣೆ ಮುಂದುವರೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಕಾಡಾನೆ ದಾಳಿಗೆ ಮೂಡಿಗೆರೆ ತಾಲೂಕು ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದ ಶೋಭಾ (45) ಮೃತಪಟ್ಟಿದ್ದರು. ಘಟನೆ ಗ್ರಾಮದ ಜನರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಎಚ್ಚೆತ್ತ ಸರ್ಕಾರ ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಆದೇಶ ಹೊರಡಿಸಿತ್ತು. ಇದೀಗ ಮೂರು ಆನೆ ಕಾಡಾನೆಗಳ ಪೈಕಿ ಒಂದು ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.
ಮೂಡಿಗೆರೆಯಲ್ಲಿ ಕಾಡಾನೆ ದಾಳಿ ಉಪಟಳ ಹೆಚ್ಚಾಗಿದ್ದು, ಕಾಡಾನೆ ದಾಳಿಗೆ ಇತ್ತೀಚೆಗೆ ಶೋಭಾ ಎಂಬ ಮಹಿಳೆ ಮೃತಪಟ್ಟ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು, ಈ ಹಿನ್ನಲೆ ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ಸರ್ಕಾರ ಮಹತ್ವದ ಆದೇಶ ಹೊರಡಿಸಿ, ತೊಂದರೆ ನೀಡುತ್ತಿರುವ 3 ಕಾಡಾನೆ ಸೆರೆ ಹಿಡಿಯಲು ಸೂಚನೆ ನೀಡಿತ್ತು. ಮೂರು ಆನೆಗಳನ್ನು ಹಿಡಿಯಲು ಸರ್ಕಾರ ಆದೇಶಿಸಿದ್ದು, ನಂತರ ಅದನ್ನು ಸುರಕ್ಷಿತ ಅರಣ್ಯಕ್ಕೆ ಬಿಡಲು ಸೂಚನೆ ನೀಡಲಾಗಿತ್ತು.