ಧಾರವಾಡದಲ್ಲಿ ಕರ್ತವ್ಯನಿರತ ಪೊಲೀಸ್ ಕಾನ್ಸ್ಟೇಬಲ್ ಅಪಘಾತ ಪ್ರಕರಣ ಸಿಸಿಟಿವಿಯಲ್ಲಿ ಅಪಘಾತದ ಭೀಕರತೆ ಸೆರೆ | Dharwad |

ಪಾಲಿಕೆ ಚುನಾವಣೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಅಪಘಾತದಲ್ಲಿ ಸಾವನಪ್ಪಿದ್ದು, ಅಪಘಾತದ ದೃಶ್ಯಗಳು ಸ್ಥಳಿಯ ಹೋಮ್ ಡೆಕೋರ್ ಅಂಗಡಿಯ ಸಿಸಿಟಿಯಲ್ಲಿ ಸೆರೆಯಾಗಿವೆ. ಹುಬ್ಬಳ್ಳಿ ಧಾರವಾಡ ರಸ್ತೆ ಓಜನ್ ಹತ್ತಿರ ನಿನ್ನೆ ಮಧ್ಯಾಹ್ನ ನಂತರ ನಡೆದ ಬೊರವೆಲ್ ವಾಹನ ಬೈಕ್ ನಡುವಿನ ಡಿಕ್ಕಿ ಸಂಭವಿಸಿತ್ತು. ಆ ಅಪಘಾತದಲ್ಲಿ ನವಲೂರು ಮೂಲದ ನಿಂಗಪ್ಪ ಬೂಸಣ್ಣವರ ವಿದ್ಯಾಗಿರಿ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಮೃತನಾಗಿದ್ದು, ಈಗ ಅಪಘಾತ ನಡೆದ ಸಮಯದ ಸಿಸಿಡಿವಿ ದೃಶ್ಯ ಅಪಘಾತದ ಭೀಕರತ್ತೆಯನ್ನು ಬಿಚ್ಚಿಟ್ಟಿದೆ. ಧಾರವಾಡದಿಂದ ಬೊರವೆಲ್ ಲಾರಿಯು ಓಜನ್ ಹೋಟೆಲ್ ಹಿಂಬದಿಯ ಎಡಗಡೆಗೆ ಟರ್ನ್ ಚಾಲಕ ತೀರುಗಿಸಿದ್ದಾನೆ. ಈ ವೇಳೆ ಹಿಂಬದಿಯಿಂದ ಬಂದ ನಿಂಗಪ್ಪ ಬೂಸಣ್ಣವರ ತಮ್ಮ ದ್ವಿಚಕ್ರವಾಹನವನ್ನು ತೀರುವಿನಲ್ಲಿ ಎಡಗಡೆ ಸೈಡ್ನಿಂದ ಪಾರಮಾಡಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ ಕಾನ್ಸ್ಟೇಬಲ್ ಬೈಕ್ ಲಾರಿ ಮುಂಭಾಗಕ್ಕೆ ಡಿಕ್ಕಿ ಹೋಡೆದಿದೆ. ಆಗ ಬೈಕ್ನಲ್ಲಿದ್ದ ಪೊಲೀಸ್ ಪೇದೆ ಬಲಗಡೆ ಲಾರಿ ಚಕ್ರದಡಿ ಬಿದಿದ್ದಾನೆ. ಈ ವೇಳೆ ಲಾರಿಯ ಚಕ್ರ ಪೋಲಿಸ್ನ ಮೇಲೆ ಹತ್ತಿ ಇಳಿದಿದ್ದು, ತೀವ್ರ ರಕ್ತ ಸ್ರಾವವಾಗಿ ನಿಂಗಪ್ಪ ಬೂಸಣ್ಣವರ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ