ಪತ್ರಿಕಾ ವಿತರಕರ ದಿನಾಚರಣೆ-ಸಂಭ್ರಮಿಸಿದ ವಿತರಕರು | Dharwad |
ಪತ್ರಿಕಾ ವಿತರಕರ ದಿನಾಚರಣೆಯ ಅಂಗವಾಗಿ ನಗರದ ಪ್ರಮುಖ ಪತ್ರಿಕಾ ವಿತರಕರು ಧಾರವಾಡದ ಎಲ್ಈಎ. ಕಾಂಪ್ಲೆಕ್ಸ್ ಬಳಿ ಹಾಗೂ ಧಾರವಾಡದ ವಿಜಯ ಕರ್ನಾಟಕ ಕಛೇರಿಯಲ್ಲಿ ಇಂದು ಕೇಕ್ ಕತ್ತರಿಸುವ ಮೂಲಕ ಪತ್ರಿಕಾ ವಿತರಕರ ದಿನಾಚರಣೆಯನ್ನು ಆಚರಿಸಿಕೊಂಡರು. ಕಾಯಕ ಯೋಗಿ ದಿವಂಗತ ರಾಷ್ಟಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಅವರ ಭಾವ ಚಿತ್ರಕ್ಕೆ ಪುಪ್ಷ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ವಿಶೇಷ ಅರ್ಥ ಕಲ್ಪಿಸಿದರು. ಅನಂತರ ಹಿರಿಯ ವಿತರಕರಾದ ನಾಗರಾಜ ಕುಲಕರ್ಣಿ ಮಾತನಾಡಿ ಪತ್ರಿಕಾ ವಿತರಕರ ದುಗುಡು ದುಮ್ಮಾನಗಳಿಗೆ ಸರಕಾರ ಇನ್ನೂ ಸ್ಪಂದಿಸಿಸಿಲ್ಲ, ಸರಕಾರಗಳು ನಮ್ಮ ಮೇಲೆ ತಾತ್ಸಾರ ಮನೋಭಾವ ಹೊಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಬೈಟ್, ಹಿರಿಯ, ವಿತರಕರಾದ, ನಾಗರಾಜ ಕುಲಕರ್ಣಿ ಮಾತನಾಡಿ, ವಿತರಕರಾದ ಶಶಿಕಾಂತ ನೀಲಾಕರಿ ಮಾತನಾಡಿ, ವಿತರಕರಾದ ಕೃಷ್ಣಾ ಕುಲಕರ್ಣಿ ಮಾತನಾಡಿ ಹಿರಿಯ ವಿತರಕರಾದ ಹಿರೇಮಠ ಅವರು ಮಾತನಾಡಿ, ಹಿರಿಯ ವಿತರಕರಾದ ಗೋವಿಂದ್ ಚಿಟಗುಬ್ಬಿ ಮಾತನಾಡಿ ಕೊರೊನಾ ದಂತಹ ಸಂಕಷ್ಟ ಸಮಯದಲ್ಲಿಯೂ ಜೀವದ ಹಂಗು ತೊರೆದು ಮನೆಮನೆಗಳಿಗೆ ಪತ್ರಿಕೆ ತಲುಪಿಸುವಲ್ಲಿ ವಿತರಕರ ಕಾರ್ಯ ಶ್ಲಾಘನೀಯ. ಈ ಸಂದರ್ಭದಲ್ಲಿ ಶೇಖರ್ ಬೇಲೂರು, ಕೆ.ಎನ್.ಹೊಂಗಲ್, ಸುರೇಶ ಸುಣಗಾರ, ಮನೋಹರ್, ಪತ್ರೇಶ್, ಮಂಜುನಾಥ್ ಹಿರೇಮಠ, ವೆಂಕಟೇಶ, ರವಿ ಮಲ್ಲಿಗವಾಡ, ಗಿರೀಶ್, ಜಿ.ಎ.ಬಾದಾಮಿ, ಜೀಶಾನ್, ಗೋವಿಂದ್ ಚಿಟಗುಬ್ಬಿ, ವಿಜಯ ಕರ್ನಾಟಕ ಉಪ ವ್ಯವಸ್ಥಾಪಕರಾದ ರವಿ ಶ್ರಿವಯ್ಯನಮಠ, ಪ್ರಜಾವಾಣಿ ಎಕ್ಸಿಕ್ಯುಟಿವ್ ಡೆನಿಸ್ ಉಪಸ್ಥಿತರಿದ್ದರು.