ನನ್ನ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ಅನ್ಯಾಯದ ವಿರುದ್ಧ-ಪ್ರಿಯಾಂಕಾ ತಿಬ್ರೆವಾಲ್

ನನ್ನ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ಅನ್ಯಾಯದ ವಿರುದ್ಧ-ಪ್ರಿಯಾಂಕಾ ತಿಬ್ರೆವಾಲ್

ವದೆಹಲಿ: ಬಿಜೆಪಿ ಪ್ರಿಯಾಂಕಾ ತಿಬ್ರೆವಾಲ್ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭಬನಿಪುರ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಕಣಕ್ಕಿಳಿಸಿದೆ.

ಚುನಾವಣಾ ನಾಮನಿರ್ದೇಶನದ ನಂತರ ತಿಬ್ರೆವಾಲ್ ತಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ಅನ್ಯಾಯದ ವಿರುದ್ಧ ಎಂದು ಹೇಳಿದರು."ನನ್ನ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ಅನ್ಯಾಯದ ವಿರುದ್ಧ. ಈ ಹೋರಾಟವು ಪಶ್ಚಿಮ ಬಂಗಾಳದ ಜನರನ್ನು ರಕ್ಷಿಸುವುದಕ್ಕಾಗಿ ಹೌದು, ಇದು ರಾಜ್ಯದಲ್ಲಿ ಹಿಂಸಾಚಾರದ ಸಮಯದಲ್ಲಿ ಮೌನವಾಗಿದ್ದ ಒಬ್ಬ ವ್ಯಕ್ತಿಯ ವಿರುದ್ಧ" ಎಂದು ಪ್ರಿಯಾಂಕಾ ತಿಬ್ರೆವಾಲ್ ಹೇಳಿದರು.

ಉಪಚುನಾವಣೆಗೆ ತನ್ನ ಘೋಷಣೆಯ ಬಗ್ಗೆ ಕೇಳಿದಾಗ, ಪ್ರಿಯಾಂಕಾ,"ಭಬನಿಪುರ ನಿಜರ್ ಮೇಕೇ ಚಾಯ್. ನಾನು ಭಬನಿಪುರದಲ್ಲಿ ಜನಿಸಿದೆ, ಮಮತಾ (Mamata Banerjee) ಭಬನಿಪುರದಲ್ಲಿ ಹುಟ್ಟಿಲ್ಲ "ಎಂದು ಹೇಳಿದರು.

"ಅವರು ಈಗಾಗಲೇ ನಂದಿಗ್ರಾಮದಿಂದ ಸೋತಿದ್ದಾರೆ. ಈಗ ಅವರು ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಲು ಈ ಚುನಾವಣೆಯಲ್ಲಿ ಹೋರಾಡುತ್ತಿದ್ದಾರೆ. ನನ್ನ ಕೆಲಸವು ಕ್ಷೇತ್ರದ ಜನರನ್ನು ತಲುಪುವುದು ಮತ್ತು ಅವರಿಗೆ ದೌರ್ಜನ್ಯ, ಚಿತ್ರಹಿಂಸೆ ಮತ್ತು ಹಿಂಸೆಯ ಬಗ್ಗೆ ತಿಳಿಸುವುದಾಗಿದೆ. ಭಬನಿಪುರದ ಜನರು ನನಗೆ ಮತ ಚಲಾಯಿಸುತ್ತಾರೆ ಮತ್ತು ಅವರನ್ನು ಸೋಲಿಸುತ್ತಾರೆ ಎನ್ನುವ ನನಗೆ ವಿಶ್ವಾಸವಿದೆ "ಎಂದು ಅವರು ಹೇಳಿದರು.

ತಿಬ್ರೇವಾಲ್ ಅವರು 2014 ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿದ್ದರು ಮತ್ತು ಪ್ರಸ್ತುತ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ), ಬಿಜೆಪಿ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.ಅವರು 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎಂಟಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಮತ್ತು ಟಿಎಂಸಿ ಅಭ್ಯರ್ಥಿ ವಿರುದ್ಧ 58,000 ಮತಗಳ ಅಂತರದಿಂದ ಸೋತಿದ್ದರು.

ಈಗ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸುವೇಂದು ಅಧಿಕಾರಿ ವಿರುದ್ಧ ಸೋತ ನಂತರ ವಿಧಾನಸಭೆಗೆ ಮರಳಲು ಅನುಕೂಲವಾಗುವಂತೆ ಕ್ಯಾಬಿನೆಟ್ ಮಂತ್ರಿಯಾಗಿದ್ದ ಸೋವಂದೇಬ್ ಚಟ್ಟೋಪಾಧ್ಯಾಯ ಸ್ಥಾನವನ್ನು ಖಾಲಿ ಮಾಡಿದ ನಂತರ ಭಬನಿಪುರಕ್ಕೆ ಉಪಚುನಾವಣೆ ಅಗತ್ಯವಾಗಿತ್ತು.