ಧಾರವಾಡ: ಬಣವೆಗೆ ಬೆಂಕಿ ಬಿದ್ದು ಲಕ್ಷಾಂತರ ಆಹಾರ ಧಾನ್ಯ ಭಸ್ಮ

ಧಾರವಾಡ: ಬಣವೆಗೆ ಬೆಂಕಿ ಬಿದ್ದು ಲಕ್ಷಾಂತರ ಆಹಾರ ಧಾನ್ಯ ಭಸ್ಮ

ಧಾರವಾಡ ತಾಲೂಕಿನ ಗುಡೇನಕಟ್ಟಿ ಗ್ರಾಮದ ಹೊಲದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಎರಡು ಬಣಿವೆ ಹಾಗೂ ಲಕ್ಷಾಂತರ ಮೌಲ್ಯದ ಆಹಾರ ಧಾನ್ಯ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ.

ಗುಡೇನಕಟ್ಟಿ ಗ್ರಾಮದ ಭೀಮಪ್ಪ ಸಿದ್ದುನ್ನವರ ಅವರಿಗೆ ಸೇರಿದ ಹೊಟ್ಟಿನ ಬಣವೆಯಲ್ಲಿ ಅಪಾರ ಪ್ರಮಾಣದ ಆಹಾರದ ಕಾಳು ಕಡಿಗ ಸಂಗ್ರಹ ಮಾಡಲಾಗಿತ್ತು.

ಇನ್ನು ಆಹಾರ ಧಾನ್ಯಗಳಲ್ಲಿ ಹುಳ ಆಗುತ್ತದೆ ಎಂದು ತಮ್ಮ ಬಣ್ಣಿಮೆಯಲ್ಲಿ ಹಾಕಿದ್ದರು.

ಇದೀಗ ಆಕಸ್ಮಿಕ ಬೆಂಕಿ ಅವಘಡದಲ್ಲಿ ಆಹಾರ ಧಾನ್ಯಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಅಗ್ನಿ ಅವಘಡದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಕುಂದಗೋಳ ಅಗ್ನಿಶಾಮಕ ಆಗಮಿಸಿ, ಬೆಂಕಿಯನ್ನು ನಂದಿಸಿದರು.

ಆದಾಗ್ಯೂ, ಅಷ್ಟರಲ್ಲಿ ಆಹಾರ ಧಾನ್ಯಗಳು ಸಂಪೂರ್ಣವಾಗಿ ಅಗ್ನಿಗಾಹುತಿ ಆಗಿತ್ತು. ಈ ಘಟನೆಯಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕುಂದಗೋಳ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.