RCB-Sanjay Bangar | ಆರ್‌ಸಿಬಿಗೆ ಸಂಜಯ್ ಬಂಗಾರ್ ಮುಖ್ಯ ಕೋಚ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
ಸಂಜಯ್ ಬಂಗಾರ್ ಅವರು ಮೈಕ್ ಹೆಸ್ಸನ್ ಅವರ ಸ್ಥಾನವನ್ನು ತುಂಬಲಿದ್ದಾರೆ.
'ಕಠಿಣ ಮತ್ತು ದೃಢವಾದ ಆಯ್ಕೆ ವಿಧಾನವನ್ನು ಅನುಸರಿಸಿ ಸಂಜಯ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ತಂಡದ ಸಾಮರ್ಥ್ಯವನ್ನು ಹೆಚ್ಚಿಸಲು ಅವರ ಅನುಭವ ನೆರವಾಗಲಿದೆ ಎಂಬ ವಿಶ್ವಾಸವಿದೆ. ಸಂಜಯ್ ಅವರಿಗೆ ಅಭಿನಂದನೆಗಳು. ಈ ಆಯ್ಕೆಗೆ ಮತ್ತು ತಮ್ಮ ಹೊಸ ಅಧ್ಯಾಯ ಪ್ರಾರಂಭಿಸುತ್ತಿರುವ ಸಂಜಯ್ ಬಂಗಾರ್ ಅವರಿಗೆ ಶುಭ ಕೋರುತ್ತೇನೆ,' ಎಂದು ಆರ್‌ಸಿಬಿ ಮುಖ್ಯಸ್ಥ ಪ್ರಥಮೇಶ್ ಮಿಶ್ರಾ ಹೇಳಿದ್ದಾರೆ.
'ಆರ್‌ಸಿಬಿಯಂಥ ಉತ್ತಮ ಫ್ರಾಂಚೈಸಿಗೆ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುವುದು ದೊಡ್ಡ ಅವಕಾಶ ಮತ್ತು ಅದೊಂದು ಗೌರವ. ಐಪಿಎಲ್ ಮೆಗಾ ಹರಾಜು ಮತ್ತು ಅದರ ನಂತರದ ಋತುವಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಎಲ್ಲರ ಬೆಂಬಲದೊಂದಿಗೆ ನಾವು ಉತ್ತಮವಾದದ್ದನ್ನು ಸಾಧಿಸಬಹುದು, ಜಗತ್ತಿನಾದ್ಯಂತ ಇರುವ ನಮ್ಮ ಅಭಿಮಾನಿಗಳನ್ನು ಹುರಿದುಂಬಿಸಬಹುದು ಎಂಬ ನಂಬಿಕೆ ನನಗಿದೆ,' ಎಂದು ನೂತನ ಕೋಚ್ ಬಂಗಾರ್ ಹೇಳಿದ್ದಾರೆ