ಕಳುವಾಗಿದ್ದ ಚಿನ್ನಾಭರಣ, ನಗದು ವಾಪಸ್: ಕುಣಿದಾಡಿದ ಬೆಳಗಾವಿ ಜನತೆ- ಪೊಲೀಸರ ಭರ್ಜರಿ ಕಾರ್ಯಾಚರಣೆ

ಬೆಳಗಾವಿ: ಬೆಳಗಾವಿ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಳ್ಳತನವಾಗಿದ್ದ 8 ಕೋಟಿ 58 ಲಕ್ಷ 23 ಸಾವಿರದ 999 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
2020 - 2021ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಳ್ಳತನವಾಗಿದ್ದ ವಸ್ತುಗಳು ಇವಾಗಿವೆ.ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಪೊಲೀಸರು, ಒಟ್ಟು 206 ಪ್ರಕರಣ ಪತ್ತೆ ಹಚ್ಚಿದ್ದಾರೆ. 3 ಕೆಜಿ 38 ಗ್ರಾಂ ಚಿನ್ನಾಭರಣ, 18 ಕೆಜಿ 156 ಗ್ರಾಂ ಬೆಳ್ಳಿ ಆಭರಣಗಳು ಇವೆ. ಉಳಿದಂತೆ, 1 ಕೋಟಿ 21 ಲಕ್ಷ 2 ಸಾವಿರದ 450 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಇಷ್ಟೇ ಅಲ್ಲದೇ ದರೋಡೆಕೋರರಿಂದ 168 ಬೈಕ್, 32 ವಾಹನ ಸೇರಿ ವಿವಿಧ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ.