'ಅಣ್ಣಾ ಇವತ್ತು ಜೈಲಿನಿಂದ ಬಿಡುಗಡೆ ಆಗ್ತಿದ್ದಾನೆ': ವಿನಯ್ ಕುಲಕರ್ಣಿಯವರನ್ನು ಬರಮಾಡಿಕೊಳ್ಳಲು ಹೋದ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ:ಮಾಜಿ ಸಚಿವ ವಿನಯ್ ಕುಲಕರ್ಣಿಯವರು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದು ಅವರನ್ನು ಬರಮಾಡಿಕೊಳ್ಳಲು ಕಾಂಗ್ರೆಸ್ ನ ಲಕ್ಷ್ಮಿ ಹೆಬ್ಬಾಳ್ಕರ್ ಹೋಗಿದ್ದಾರೆ.
'ನನ್ನ ಸಹೋದರನಾದಂತಹ ವಿನಯ್ ಕುಲಕರ್ಣಿಯವರು ಬೇಲ್ ಮೇಲೆ ಇಂದು ಹೊರಗಡೆ ಬರ್ತಾ ಇದ್ದಾರೆ.ನಾಳೆ ರಕ್ಷಾ ಬಂಧನ.ಒಬ್ಬ ಸಹೋದರ ಹೊರಗಡೆ ಬರ್ತಾ ಇದ್ದಾನೆ ಅಂತ ಅವರನ್ನು ಬರಮಾಡಿಕೊಳ್ಳಲಿಕ್ಕೆ ನಾನು ಬಂದಿದೀನಿ.ರಾಜಕೀಯೇತರವಾಗಿ ನನ್ನ ಹಾಗೂ ಕುಲಕರ್ಣಿಯವರ ಸಂಬಂಧ ಇದೆ.ಅದಕ್ಕೋಸ್ಕರ ನಾನು ಅವರನ್ನು ಕರೆಯೋಣ, ಅವರಿಗೆ ಧೈರ್ಯ ತುಂಬೋಣ ಅಂತ ಒಬ್ಬ ತಂಗಿಯಾಗಿ ಬರಮಾಡಿಕೊಳ್ಳೋಣ ಅಂತ ಇವತ್ತು ಇಲ್ಲಿಗೆ ಬಂದಿದೀನಿ' ಎಂದರು.
ಪ್ರಕರಣದ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ 'ಅದನ್ನು ಈ ಸಂಧರ್ಭದಲ್ಲಿ ಮಾತನಾಡುವುದಿಲ್ಲ.ಕೋರ್ಟ್ ಕೇಸ್ ನಡೆಯುತ್ತಿರುವುದರಿಂದ ನಾನು ಮಾತನಾಡುವ ಹಾಗಿಲ್ಲ ' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.