ಮಹಿಳಾ ದ್ವೇಷಿ ವರ್ತನೆಯಲ್ಲಿ ಕಾಂಗ್ರೆಸ್, ಬಿಜೆಪಿ ಒಟ್ಟಾಗಿವೆ- ಪ್ರಣಬ್ ಪುತ್ರಿ

ನವದೆಹಲಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರ ಹೇಳಿಕೆ ಬಗ್ಗೆ ಕಾಂಗ್ರೆಸ್ ಮುಖಂಡೆ ಶರ್ಮಿಷ್ಠಾ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ. ರಮೇಶ್ ಕುಮಾರ್ ತಮಾಷೆ ಮಾಡಿದರೆ, ಬಿಜೆಪಿ ಸ್ಪೀಕರ್ ನಗುತ್ತಿದ್ದಾರೆ. ಇಬ್ಬರೂ ಮಹಿಳಾ ದ್ವೇಷಿ ವರ್ತನೆ ತೋರಿರುವುದು ನಾಚಿಕೆಗೇಡಿತನದು ಎಂದಿದ್ದಾರೆ.
Congress MLA cracks a ‘joke’, Speaker (from BJP) laughs….United in their misogynistic attitude! Shame!
— Sharmistha Mukherjee (@Sharmistha_GK) December 17, 2021
ರಮೇಶ್ ಕುಮಾರ್ ಅತ್ಯಾಚಾರ ಹೇಳಿಕೆ ಕುರಿತು ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ಟೀಕಿಸಿರುವ ಬಿಜೆಪಿ, ಈ ವಿಚಾರದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮೌನವನ್ನು ಪ್ರಶ್ನಿಸಿತ್ತು. ಮಹಿಳೆಯರ ಬಗ್ಗೆ ಇಂತಹ ಅಪಮಾನದ ಹೇಳಿಕೆ ನೀಡಿರುವ ಇತಿಹಾಸವನ್ನು ಕಾಂಗ್ರೆಸ್ ಪಕ್ಷದ ನಾಯಕರು ಹೊಂದಿದ್ದಾರೆ ಎಂದು ಆರೋಪಿಸಿದೆ.
ಆದಾಗ್ಯೂ, ರಮೇಶ್ ಕುಮಾರ್ ಅತ್ಯಾಚಾರ ಹೇಳಿಕೆಗೆ ಆಕ್ಷೇಪಿಸದೆ ನಗುತ್ತಿದ್ದ ಆಡಳಿತಾರೂಢ ಬಿಜೆಪಿ ಪಕ್ಷದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ತನ್ನದೇ ಪಕ್ಷದ ವಕ್ತಾರರಾದ ಅಪರಾಜಿತ ಸಾರಂಗಿ ಟೀಕಿಸಿದಾಗ ಬಿಜೆಪಿ ಕೂಡಾ ಮುಜುಗರ ಎದುರಿಸುವಂತಾಯಿತು. ಅಂತಹ ಆಕ್ಷೇಪಾರ್ಹ ಹೇಳಿಕೆ ನೀಡಿದರೂ ಏನನ್ನೂ ಹೇಳದ ಸ್ಪೀಕರ್ ನಡೆ ದು;ಖಕರದು ಎಂದು ಆಕೆ ಹೇಳಿದ್ದಾರೆ.
कर्नाटक के पूर्व विधानसभा अध्यक्ष और वर्तमान में वरिष्ठ कांग्रेस विधायक श्री के आर रमेश कुमार जी ने बड़ी भद्दी बात विधानसभा में कही।
— डीडी न्यूज़ (@DDNewsHindi) December 17, 2021
उन्होंने कहा - “When rape is inevitable, lie down and enjoy it.: @AprajitaSarangi pic.twitter.com/PfBPIvnLC2