ಚಾಮರಾಜನಗರ: ಪತಿಯಿಂದಲೇ ಪತ್ನಿ ಕೊಲೆ

ಚಾಮರಾಜನಗರ: ಪತಿಯಿಂದಲೇ ಪತ್ನಿ ಕೊಲೆ

ಚಾಮರಾಜನಗರ: ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಮಹೇಶ ಎಂಬುವವರು ಭಾನುವಾರ ರಾತ್ರಿ ಪತ್ನಿಯನ್ನೇ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ.

ರತ್ನಮ್ಮ (30) ಕೊಲೆಯಾದ ಮಹಿಳೆ. ಚಾಮರಾಜನಗರ ಗ್ರಾಮಾಂತರ ಪೊಲೀಸರು ಆರೋಪಿ ಮಹೇಶನನ್ನು ವಶಕ್ಕೆ ಪಡೆದಿದ್ದಾರೆ.

ದಂಪತಿಗೆ 13 ವರ್ಷದ ಮಗಳು ಮತ್ತು 9 ವರ್ಷದ ಮಗ ಇದ್ದಾನೆ.

ದಂಪತಿ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಭಾನುವಾರ ರಾತ್ರಿಯೂ ಜಗಳ ಆಗಿದ್ದು, ಅದು ತಾರಕಕ್ಕೇರಿದಾಗ ಮಹೇಶ ಮಚ್ಚಿನಿಂದ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ.

ಚಾಮರಾಜನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.