ನಟ ಕಿಚ್ಚ ಸುದೀಪ್ ಬಿಜೆಪಿ ಪಕ್ಷಕ್ಕೆ ಬಂದರೆ ಲಾಭ ಆಗುತ್ತೆʼ : ಸಚಿವ ಶ್ರೀರಾಮುಲು
ಬೆಂಗಳೂರು : ಕಿಚ್ಚ ಸುದೀಪ್ (Kichcha Sudeep ) ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಸಚಿವ ಶ್ರೀರಾಮುಲು(Minister Sriramulu)ಮಾತನಾಡಿ, 'ನಟ ಕಿಚ್ಚ ಸುದೀಪ್ ಬಿಜೆಪಿ ಪಕ್ಷಕ್ಕೆ ಬಂದರೆ ಲಾಭ ಆಗುತ್ತೆಎಂದು ಪ್ರತಿಕ್ರಿಯಿಸಿದ್ದಾರೆ
ರಾಜ್ಯದೆಲ್ಲೆಡೆ ವಿಧಾನ ಸಭೆ ಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದ ಬೆನ್ನಲ್ಲೆ ಕಿಚ್ಚ ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈಗಾಗಲೇ ಇಂದು ಸಿಎಂ ಕರೆದಿರುವ ಪತ್ರಿಕಾಗೋಷ್ಠಿ ಎಲ್ಲರ ಗಮನ ಸೆಳೆದಿದೆ. ಈ ಬೆನ್ನಲ್ಲೆ ನಟ ಸುದೀಪ್ ಪರವಾಗಿ ಸಚಿವ ಶ್ರೀರಾಮುಲು ಸುದ್ದಿಗಾರರೊಂದಿಗೆ ಮಾತನಾಡಿ, ಸುದೀಪ್ ಪಕ್ಷಕ್ಕೆ ಬರ್ತಾರೆ ಅನ್ನೋದು ಗೊತ್ತಿಲ್ಲ. ನಾನೂ ಮಾಧ್ಯಮಗಳಲ್ಲಿ ನೋಡಿದ್ದು, ಇದನ್ನು ತಿಳಿದುಕೊಂಡು ಮಾತಾಡ್ತೇನೆ. ಸುದೀಪ್ ಬಂದ್ರೆ ಪಕ್ಷಕ್ಕೆ ಲಾಭ ಆಗುತ್ತೆ. ಸುದೀಪ್ ಪಕ್ಷಕ್ಕೆ ಬಂದ್ರೆ ಸ್ವಾಗತಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಿಚ್ಚ ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ
ಕಿಚ್ಚ ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ ನೀಡಿದ್ದು, ಸುದೀಪ್ ಬಿಜೆಪಿ ಸೇರ್ಪಡೆಗೆ ನಮ್ಮದೇನು ಅಭ್ಯಂತರವಿಲ್ಲ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದೆಲ್ಲೆಡೆ ವಿಧಾನ ಸಭೆ ಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದ ಬೆನ್ನಲ್ಲೆ ಕಿಚ್ಚ ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈಗಾಗಲೇ ನಟ ಸುದೀಪ್ ಅವರು ರಾಜ್ಯ ರಾಜಕೀಯಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಇಂದು ಸಿಎಂ ಕರೆದಿರುವ ಪತ್ರಿಕಾಗೋಷ್ಠಿ ಎಲ್ಲರ ಗಮನ ಸೆಳೆದಿದೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್ ನೀಡಿದ್ದು, ಸುದೀಪ್ ಬಿಜೆಪಿ ಸೇರ್ಪಡೆಗೆ ನಮ್ಮದೇನು ಅಭ್ಯಂತರವಿಲ್ಲ ಪ್ರತಿಕ್ರಿಯಿಸಿದ್ದಾರೆ.
ಸುದೀಪ್ ಬಿಜೆಪಿ ಸೇರ್ಪಡೆ: ಮಹತ್ವದ ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ನಟ ಸುದೀಪ್ ಅವರು ರಾಜ್ಯ ರಾಜಕೀಯಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಇಂದು ಸಿಎಂ ಕರೆದಿರುವ ಪತ್ರಿಕಾಗೋಷ್ಠಿ ಎಲ್ಲರ ಗಮನ ಸೆಳೆದಿದೆ. ಈ ನಡುವೆ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿರುವ ಸಿಎಂ ಈ ಬಗ್ಗೆ ಚರ್ಚೆ ಮಾಡ್ತೀನಿ ಅಂತ ತಿಳಿಸಿದ್ದಾರೆ.