ಕನ್ನಡಿಗರ ಗ್ರಾಪಂ ವಿಸರ್ಜನೆ ಬೆದರಿಕೆ ಒಡ್ಡಿದ ಮಹಾರಾಷ್ಟ್ರ

ಕನ್ನಡಿಗರ ಗ್ರಾಪಂ ವಿಸರ್ಜನೆ ಬೆದರಿಕೆ ಒಡ್ಡಿದ ಮಹಾರಾಷ್ಟ್ರ

ಕರ್ನಾಟಕ ಸೇರುವುದಾಗಿ ಗಾಡಿನಾಡ ಕನ್ನಡದ ಗ್ರಾಮ ಪಂಚಾಯತ್‍ಗಳು ನಿರ್ಣಯ ಅಂಗೀಕರಿಸಿದ ಬೆನ್ನಲ್ಲೇ, ಸೇಡಿನ ಕ್ರಮವಾಗಿ ಮಹಾರಾಷ್ಟ್ರ ಸರ್ಕಾರ ಕನ್ನಡಿಗರು ನೆಲೆಸಿರುವ ಗ್ರಾ.ಪಂ.ಗಳನ್ನು ವಿಸರ್ಜಿಸುವುದಾಗಿ ಬೆದರಿಕೆ ಹಾಕಿದೆ. ಅಲ್ಲದೇ ಗ್ರಾ.ಪಂ. ಅಧಿಕಾರಿಗಳನ್ನು ಸೇವೆಯಿಂದ ತೆಗೆದು ಹಾಕುವ ಎಚ್ಚರಿಕೆ ನೀಡಿದೆ. ಇದಕ್ಕೆ ಹೆದರದ ಕನ್ನಡಿರು, ಗಲ್ಲು ಶಿಕ್ಷೆ ವಿಧಿಸಿದರೂ, ಸರಪಂಚಿಕೆ, ನೌಕರಿ ಹೋದರೂ ಜಗ್ಗುವುದಿಲ್ಲ. ಆದರೆ ನಮ್ಮ ಹೋರಾಟವನ್ನು ಮಾತ್ರ ಕೈ ಬಿಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.