ಉತ್ತರಕರ್ನಾಟಕ ಭಾಗದ ಭಕ್ತಾಧಿಗಳಿಗೆ ಗುಡ್‌ ನ್ಯೂಸ್ : ಹುಬ್ಬಳ್ಳಿ-ತಿರುಪತಿ ರೈಲು ಪುನರಾರಂಭ, ವೇಳಾಪಟ್ಟಿ

ಉತ್ತರಕರ್ನಾಟಕ ಭಾಗದ ಭಕ್ತಾಧಿಗಳಿಗೆ ಗುಡ್‌ ನ್ಯೂಸ್ : ಹುಬ್ಬಳ್ಳಿ-ತಿರುಪತಿ ರೈಲು ಪುನರಾರಂಭ, ವೇಳಾಪಟ್ಟಿ

ಹುಬ್ಬಳ್ಳಿ : ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಉತ್ತರ ಕರ್ನಾಟಕ ಭಾಗದ ಭಕ್ತರಿಗೆ ಸಿಹಿಸುದ್ದಿ. ಭಾರತೀಯ ರೈಲ್ವೆ ಹುಬ್ಬಳ್ಳಿ-ತಿರುಪತಿ ನಡುವಿನ ಪ್ರಯಾಣಿಕ ರೈಲುಗಳ ಸಂಚಾರವನ್ನು ಪುನರಾರಂಭ ಮಾಡಲು ತೀರ್ಮಾನಿಸಿದೆ.

ಭಾರತೀಯ ರೈಲ್ವೆ ತಿರುಪತಿ ಮತ್ತು ಹುಬ್ಬಳ್ಳಿ ನಡುವೆ ರೈಲು ಸಂಖ್ಯೆ 07657-07658 ಓಡಿಸಲಿದೆ. ಪ್ರಯಾಣಿಕರ ಬಹುದಿನದ ಬೇಡಿಕೆಯಂತೆ ರೈಲು ಸೇವೆ ಪುನಃ ಆರಂಭಿಸಲಾಗುತ್ತಿದೆ. ಇದರಿಂದಾಗಿ ಅಕ್ಕಪಕ್ಕದ ರಾಜ್ಯಗಳ ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ.

ಮಣಿಂದರ್ ಸಿಂಗ್ ನ ಹಾಡಿ ಹೊಗಳಿದ ಬೆಂಗಾಲ್ ವಾರಿಯರ್ ಕ್ಯಾಪ್ಟನ್!! ದಕ್ಷಿಣ ಕೇಂದ್ರ ರೈಲ್ವೆ ಹುಬ್ಬಳ್ಳಿ-ತಿರುಪತಿ-ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್ ರೈಲು ಆರಂಭಿಸುವ ಕುರಿತು ಪ್ರಕಟಣೆ ಹೊರಡಿಸಿದೆ. ಅಕ್ಟೋಬರ್ 17 ರಿಂದ ರೈಲು ಸಂಚಾರ ಆರಂಭವಾಗುತ್ತಿದೆ. ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ವೇಳಾಪಟ್ಟಿ; ಹುಬ್ಬಳ್ಳಿ-ತಿರುಪತಿ-ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್ ರೈಲು ಅಕ್ಟೋಬರ್ 17ರಂದು ತಿರುಪತಿಯಿಂದ ಬೆಳಗ್ಗೆ 6.10ಕ್ಕೆ ಹೊರಟು ರಾತ್ರಿ 9.10ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ರೈಲು ಸೇವೆ ಅಕ್ಟೋಬರ್ 18ರಂದು ಆರಂಭವಾಗಲಿದೆ. ಹುಬ್ಬಳ್ಳಿ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಡುವ ರೈಲು ರಾತ್ರಿ 9.50ಕ್ಕೆ ತಿರುಪತಿಗೆ ತಲುಪಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಕರ್ನಾಟಕ ರೈಲ್ವೆ ಕ್ರಿಯಾ ಸಮಿತಿ ರೈಲು ಸೇವೆಯನ್ನು ಪುನಃ ಆರಂಭಿಸಬೇಕು ಎಂದು ಒತ್ತಾಯ ಮಾಡಿತ್ತು. ಹುಬ್ಬಳ್ಳಿಗೆ ಭೇಟಿ ನೀಡಿ ನೈಋತ್ಯ ರೈಲ್ವೆ ಮ್ಯಾನೇಜರ್‌ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಕೆ ಮಾಡಿತ್ತು.

ಡೆಮು ರೈಲು ವಿಸ್ತರಣೆ; ಬಳ್ಳಾರಿ-ಹರಿಹರ ಮತ್ತು ಹೊಸಪೇಟೆ-ಬಳ್ಳಾರಿ ಡೆಮು ವಿಶೇಷ ರೈಲಿನ ಸೇವೆಯನ್ನು ವಿಸ್ತರಣೆ ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ. ಬಳ್ಳಾರಿ-ಹರಿಹರ (07395), ಹರಿಹರ-ಬಳ್ಳಾರಿ (07396) ಮತ್ತು 07397 ಹೊಸಪೇಟೆ-ಬಳ್ಳಾರಿ ರೈಲು ಸೇವೆಯನ್ನು ಅಕ್ಟೋಬರ್ 17ರಿಂದ 2023ರ ಏಪ್ರಿಲ್ 14ರ ತನಕ ವಿಸ್ತರಣೆ ಮಾಡಲಾಗಿದೆ.