ಇಕೋ ಫ್ರೆಂಡ್ಲಿ ಗಣೇಶ ಸ್ಥಾಪನೆಗೆ ನಟಿ ಭುವನಾ | Hubli | Ganpati |
ಹುಬ್ಬಳ್ಳಿ ಪರಿಸರ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಣೆ ಮಾಡಲು ನಟಿ ಭುವನಾ ಹುಬ್ಬಳ್ಳಿಯಲ್ಲಿ ಜನಜಾಗೃತಿಯಲ್ಲಿ ಮುಂದಾಗಿದ್ದಾರೆ. ನಟಿ, ಸಿಲೆಬ್ರಿಟಿಗಳು ಕೇವಲ ನಟನೆಗೆ ಮಾತ್ರ ಸೀಮಿತವಾಗಿರದೇ ಸಮಾಜಮುಖಿ ಕಳಕಳಿಯನ್ನೂ ಪರಿಸರ ಸ ಬಗ್ಗೆ ಕಾಳಜಿಯನ್ನೂ ಇಟ್ಟುಕೊಂಡಿದ್ದಾರೆ. ಅವರಲ್ಲನೇಕರು ಈ ಬಾರಿಯ ಗೌರಿ ಗಣೇಶ ಹಬ್ಬಕ್ಕೆ ಪರಿಸರಸ್ನೇಹಿ ಗಣೇಶನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಾರದಲ್ಲೂ ತೊಡಗಿದ್ದಾರೆ. ಈ ಕುರಿತು ನಟಿಯರಾದ ಭುವನಾ ಮಂಗಳವೇಡಿಕರ್ ಲವಲವಿಕೆಯೊಂದಿಗೆ ಅಟೋ ಚಾಲಕರು ಸೇರಿದಂತೆ ಜನಸಾಮಾನ್ಯರಿಗೆ ಈ ಕುರಿತು ತಿಳುವಳಿಕೆ ಮೂಡಿಸಲು ನಿರತರಾಗಿದ್ದು ಶ್ಲಾಘನೀಯ. ದೇವರ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡುವುದು ಸರಿಯಲ್ಲ. ನಾನು ಪ್ರತಿ ಬಾರಿಯೂ ಪರಿಸರಕ್ಕೆ ಪೂರಕವಾದ ಮಣ್ಣಿನ ಗಣೇಶನನ್ನು ಕೂರಿಸುವ ಬಗ್ಗೆ ಪ್ರೋತ್ಸಾಹ ನೀಡುತ್ತೇನೆ. ಅಲ್ಲಿ ಮಕ್ಕಳಿಂದ ಹಿಡಿದು ಎಲ್ಲರಿಗೂ ಇದರ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಕಾರ್ಯಕ್ರಮವನ್ನು ಎಂಜಾಯ್ ಮಾಡುವೆ. ನಮ್ಮ ಮನೆ ಮತ್ತು ಸುತ್ತಮುತ್ತಲಿನಲ್ಲಿ ಇಕೋ ಫ್ರೆಂಡ್ಲಿ ಗಣೇಶನಿಗೆ ಪೂಜೆ ಮಾಡುವೆ' ಎನ್ನುತ್ತಾರೆ ಭುವನಾ. ಯುವಜನರಿಗೆ ಗೌರಿ, ಗಣೇಶ ಹಬ್ಬವೆಂದರೆ ಬಹಳ ಕ್ರೇಝ್ ಇರುತ್ತದೆ. ವಿಜೃಂಭಣೆಯ ಖುಷಿಗಾಗಿ ಬಣ್ಣಮಯ ಗಣೇಶನನ್ನು ಇಟ್ಟು ಆಚರಿಸುವುದನ್ನು ತಪ್ಪಿಸಬೇಕು. ಅದರ ಬದಲು ಮಣ್ಣಿನ ಗಣಪನನ್ನು ಮಾಡುವ ಕಾರ್ಯಾಗಾರದಲ್ಲಿ ಭಾಗವಹಿಸಿ. ಅಲ್ಲಿ ನೀವೇ ತಯಾರಿಸಿದಾಗ ಬಹಳ ಖುಷಿ ಸಿಗುತ್ತದೆ. ಇಂತಹ ಕಾರ್ಯಗಾರಗಳು ನಮಗೆ ಖುಷಿ ಕೊಡುವುದಲ್ಲದೇ ಹಲವಾರು ವಿಷಯವನ್ನು ತಿಳಿಸಿಕೊಟ್ಟು ನಮ್ಮ ಕೌಶಲಮಟ್ಟವನ್ನು ವೃದ್ಧಿಸುತ್ತವೆ' ಎನ್ನುವ ಇವರು. ಆಧುನೀಕರಣದ ಪರಿಣಾಮದಿಂದಾಗಿ ಕರೆ, ನದಿಗಳ ನಾಶವಾಗಿದೆ. ಅದಲ್ಲದೇ ಹಬ್ಬದ ಸಲುವಾಗಿ ಗಣೇಶನನ್ನು ತಂದು ವಿಸರ್ಜಿಸಿದಾಗ ಮತ್ತಷ್ಟು ಮಾಲಿನ್ಯವಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಇರುವ ಗಣೇಶನ ಪೋಟೋ, ಬೆಳ್ಳಿ ಗಣಪ, ಕಂಚಿನ ಗಣಪತಿಗೆ ಪೂಜೆ ಮಾಡಿದರೆ ಸಾಕಷ್ಟೆ. ಮತ್ತೆ ಮುಂದಿನ ವರ್ಷವೂ ಅದನ್ನೇ ಉಪಯೋಗಿಸಬಹುದು. ಮನೆಯಲ್ಲಿ ಇದ್ದಂತೂ ಆಗುತ್ತದೆ. ಇದರಿಂದ ಜಲಮಾಲಿನ್ಯವನ್ನು ತಡೆಗಟ್ಟಬಹುದು. ಇದನ್ನು ಮಕ್ಕಳು ಮನವರಿಕೆ ಮಾಡಬೇಕು' ಅವರ ಮನದಾಳದ ಮಾತಾಗಿದೆ.