ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಭರವಸೆಯಲ್ಲಿ ಸಿದ್ದು

ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿ ಏರ್ ಪೋಟ್೯ನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಏನೂ ಅಭಿವೃಧ್ಧಿ ಮಾಡಿಲ್ಲ.ಇವಾಗ ಮನೆ ಕೊಟ್ಟೆ ಅಂತ ಬೊಮ್ಮಾಯಿ ಆದೇಶ ಮಾಡ್ಕೊಂಡು ಬಂದಿದ್ದಾರೆ.ಏಲೆಕ್ಷನ್ ಗೋಸ್ಕರ ಆದೇಶ ಮಾಡಿದ್ದಾರೆ ಬೊಮ್ಮಾಯಿ ಎಂದರು.ಬಿಜೆಪಿಯವರಿಗೆ ದುಡ್ಡು ಹಂಚೋದೆ ಕೆಲಸ.ಒಂದೊಂದು ಕ್ಷೇತ್ರದಲ್ಲಿ ೧೦-೧೨ ಸಚಿವರು ಠಿಕಾಣಿ ಹೂಡಿದ್ದಾರೆ.ಹಣದ ಚೀಲ ತುಂಬಿಕೊಂಡು ಬಂದಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದಾಗಿ ಹೇಳಿದರು. ನಾನು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಕೆ ಸವಾಲ್ ಬೊಮ್ಮಾಯಿಯವರಿಗೆ ಹಾಕ್ದೆ. ಆದ್ರೆ ಅವರು ಅಸೆಂಬ್ಲಿಯಲ್ಲಿ ಚರ್ಚೆ ಮಾಡೋಣ ಅಂತಾರೆ. ಜನತಾ ನ್ಯಾಯಲಯದ ಮುಂದೆ ಚರ್ಚೆ ಮಾಡೋಕೆ ಯಾಕೆ ಭಯ*. ಅವರು ಹೇಳಿದ್ದು ಸತ್ಯ ಇರೋದಾದ್ರೆ ಜನರ ಮುಂದೆ ವೇದಿಕೆಯಲ್ಲಿ ಚರ್ಚೆ ಮಾಡೋಕೆ ಯಾಕೆ ಭಯ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಎಲ್ಲ ಸಮುದಾಯದ ಪರವಾಗಿದೆ.ಅನ್ನಭಾಗ್ಯ ಯೋಜನೆ ಬಗ್ಗೆ ಕೇಂದ್ರದ ಅನುದಾನ ಹೆಚ್ಚಿದೆ ಎನ್ನೋ ಬೊಮ್ಮಾಯಿ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಪೆದ್ದರ ರೀತಿ ಮಾತಾಡ್ತಾರೆಂದರು. ಸಿದ್ದರಾಮಯ್ಯ ಲಿಂಗಾಯತ ಸ್ವಾಮೀಜಿಗಳನ್ನ ಅವಮಾನಿಸಿದ್ದಾರನ್ನೋ ಬಿಜೆಪಿ ಟ್ವಿಟ್ ವಿಚಾರದಲ್ಲಿ ಮಾತನಾಡಿದ ಅವರು ಸುಳ್ಳು ಟ್ವಿಟ್ ಮಾಡೋದೆ ಅವರ ಕಸುಬಾಗಿದೆ. ನಾನು ಸ್ವಾಮೀಜಿಗಳ ಬಗ್ಗೆ ಮಾತನಾಡೋಕೆ ಇಲ್ಲ ಎಂದರು ಸಿದ್ದರಾಮಯ್ಯ ಬಗ್ಗೆ ಸಿಟಿ ರವಿ ಟ್ವಿಟ್ ವಿಚಾರದಲ್ಲಿ ಮಾತನಾಡಿದ ಅವರು, ಸಿ.ಟಿ ರವಿ ಯಾರು ಅಂವ. ಯಾರ್ಯಾರೋ ಬಗ್ಗೆ ಪ್ರಶ್ನೆ ಕೇಳ್ತಿರಿ ಎನ್ನುತ್ತಾ ಸಿದ್ದರಾಮಯ್ಯ ಹೊರಟು ಹೊದರು.