ರಾತ್ರಿ ನೆನೆಸಿಟ್ಟು ಈ ಆಹಾರ ಸೇವಿಸಿದ್ರೆ ಆರೋಗ್ಯಕ್ಕೆ ಅಪಾರ ಪ್ರಯೋಜನ
ನವದೆಹಲಿ: ಜನರು ಆರೋಗ್ಯವಾಗಿರಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಾರೆ. ಅನೇಕ ಜನರು ತಮ್ಮ ಆಹಾರ ಮತ್ತು ಪಾನೀಯಕ್ಕೆ ಹೆಚ್ಚಿನ ಗಮನ ನೀಡುತ್ತಾರೆ. ಕೆಲವರು ದುಬಾರಿ ಡ್ರೈಫ್ರೂಟ್ಸ್ ತಿನ್ನುತ್ತಾರೆ. ಆದರೆ ಸರಿಯಾದ ಆಹಾರ ಕ್ರಮ ತಿಳಿಯುವವರೆಗೆ ಇವುಗಳನ್ನು ತಿನ್ನುವುದರಿಂದ ಯಾವುದೇ ಪ್ರಯೋಜನವಿಲ್ಲ.
ನೀರಿನಲ್ಲಿ ನೆನೆಸುವುದರಿಂದ ಇಂತಹ
ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ. ಹೀಗೆ ತಿನ್ನುವುದರಿಂದ ಪೌಷ್ಟಿಕಾಂಶ ಹೆಚ್ಚುತ್ತದೆ ಮತ್ತು ಸಾಕಷ್ಟು ಶಕ್ತಿಯೂ ಸಿಗುತ್ತದೆ. ಇಂತಹ ಮೊಳಕೆ ಬರಿಸಿದ ಪದಾರ್ಥಗಳನ್ನು ತಿನ್ನುವುದು ದೇಹಕ್ಕೆ ಪ್ರಯೋಜನಕಾರಿ. ಅವುಗಳನ್ನು ತಿನ್ನುವುದರಿಂದ ಅನೇಕ ರೋಗಗಳ ಅಪಾಯವು ದೂರವಾಗುತ್ತವೆ.
ಹೆಸರು ಕಾಳು
ಹೆಸರು ಕಾಳು ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್, ಫೈಬರ್ ಮತ್ತು ಬಿ ಜೀವಸತ್ವಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ನೆನೆಸಿದ ನಂತರ ಇದನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕ್ಯಾನ್ಸರ್ನಂತಹ ರೋಗಗಳ ಅಪಾಯವನ್ನು ದೂರವಿಡುತ್ತದೆ.
ಒಣ ದ್ರಾಕ್ಷಿ
ಒಣದ್ರಾಕ್ಷಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದರಲ್ಲಿ ಆಯಂಟಿ-ಆಕ್ಸಿಡೆಂಟ್ಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳಿವೆ. ನೆನೆಸಿದ ಒಣದ್ರಾಕ್ಷಿ ತಿನ್ನುವುದು ತುಂಬಾ ಪ್ರಯೋಜನಕಾರಿ. ಈ ರೀತಿ ಒಣದ್ರಾಕ್ಷಿ ತಿನ್ನುವುದರಿಂದ ರಕ್ತಹೀನತೆ, ಕಿಡ್ನಿ ಸ್ಟೋನ್ ಮತ್ತು ಅಸಿಡಿಟಿಯಂತಹ ಕಾಯಿಲೆಗಳು ದೂರವಿಡುತ್ತವೆ.
ಮೊಳಕೆ ಕಾಳು
ಮೊಳಕೆ ಕಾಳು ತಿನ್ನುವುದು ತುಂಬಾ ಪ್ರಯೋಜನಕಾರಿ. ಈ ರೀತಿ ಬೇಳೆಯನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಮೊಳಕೆ ಕಾಳು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಇದು ತ್ರಾಣವನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಅಂಜೂರ
ಅಂಜೂರದಲ್ಲಿ ಸತು, ಮೆಗ್ನೀಸಿಯಮ್, ಕಬ್ಬಿಣ, ಪ್ರೋಟೀನ್ ಮತ್ತು ವಿಟಮಿನ್ಗಳು ಸಮೃದ್ಧವಾಗಿವೆ. ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದು ತೂಕ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆನೆಸಿದ ಅಂಜೂರದ ಹಣ್ಣುಗಳು ದೇಹದಲ್ಲಿನ ರಕ್ತದ ಕೊರತೆಯನ್ನು ಹೋಗಲಾಡಿಸುತ್ತದೆ.
ಬಾದಾಮಿ
ವಿಟಮಿನ್ A, ವಿಟಮಿನ್ E ಮತ್ತು ಆಂಟಿ-ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿರುವ ನೆನೆಸಿದ ಬಾದಾಮಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ರೀತಿ ಬಾದಾಮಿ ತಿನ್ನುವುದರಿಂದ ಮೆದುಳು ಬಲಗೊಳ್ಳುತ್ತದೆ. ಇದು ಹೃದಯಕ್ಕೂ ಪ್ರಯೋಜನಕಾರಿ.
ಮೆಂತ್ಯ
ಮೆಂತ್ಯದಲ್ಲಿ ಅನೇಕ
ಗಳಿವೆ. ಇದನ್ನು ನೆನೆಸಿಟ್ಟು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆನೆಸಿದ ಮೆಂತ್ಯವನ್ನು ತಿನ್ನುವುದರಿಂದ ಬೊಜ್ಜು, ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ರೀತಿ ಮೆಂತ್ಯವನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೂ ದೂರವಾಗುತ್ತವೆ.