ಅಜ್ಜ ಆಗ್ತಾ ಇದ್ದಾರೆ ಮಾಜಿ ಸಿಎಂ HD ಕುಮಾರಸ್ವಾಮಿ : ಪುತ್ರ ನಿಖಿಲ್ ಕುಮಾರ್ ಪತ್ನಿ ರೇವತಿಗೆ 5 ತಿಂಗಳು.!

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಏಪ್ರಿಲ್ 17, 2020ರಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಅವರು, ರೇವತಿಯೊಂದಿಗೆ ವಿವಾಹ ಆಗುವ ಮೂಲಕ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ನಿಖಿಲ್ ಕುಮಾರ್ ಪತ್ನಿ ರೇವತಿಗೆ ಐದು ತಿಂಗಳು ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಈಗ ತಾತ ಆಗುತ್ತಿದ್ದಾರೆ.
ಈ ಕುರಿತಂತೆ ಮಾಹಿತಿಯನ್ನು ಸ್ವತಹ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರೇ ಹಂಚಿಕೊಂಡಿದ್ದು, ತಮ್ಮ ಪುತ್ರನ ಪತ್ನಿ, ಸೊಸೆ ರೇವತಿಯವರಿಗೆ ಐದು ತಿಂಗಳು ತುಂಬಿರೋದಾಗಿ ತಿಳಿಸುವ ಮೂಲಕ, ತಾತನಾಗುತ್ತಿರುವ ವಿಷಯವನ್ನು ಖಚಿತಪಡಿಸಿದ್ದಾರೆ.
ಅಂದಹಾಗೇ, ಕನ್ನಡ ಚಿತ್ರರಂಗದ ಯುವ ರಾಜ್ ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ನಿಖಿಲ್ ಕುಮಾರಸ್ವಾಮಿ ತಮ್ಮ ಇನ್ಟಾ ಗ್ರಾಂ ಮೂಲಕ ಪತ್ನಿಗೆ ಶುಭ ಹಾರೈಸಿದ್ದಾರೆ. ಅದು ನಿಖಿಲ್-ರೇವತಿ ಮೆಹಂದಿ ಶಾಸ್ತ್ರದ ಸಮಯದಲ್ಲಿ ಸೆರೆ ಹಿಡಿದಿದ್ದಂತ ಪೋಟೋ ಹಂಚಿಕೊಂಡು ಆಗಿದೆ.