ಶಾಪಿಂಗ್ ಮೂಡ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ: ಅವೆನ್ಯೂ ರೋಡ್‌ನಲ್ಲಿ 30 ಪಂಚೆ ಖರೀದಿ..!
ಶಾಪಿಂಗ್ ಮೂಡ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ: ಅವೆನ್ಯೂ ರೋಡ್‌ನಲ್ಲಿ 30 ಪಂಚೆ ಖರೀದಿ..!
ಖಾದಿ ಮಳಿಗೆಯಲ್ಲಿ ವಿವಿಧ ವೈರೈಟಿಯ ಪಂಚೆಗಳ ಬಗ್ಗೆ ಸಿದ್ದರಾಮಯ್ಯ ವಿಚಾರಿಸಿದರು. ವಿಶೇಷವಾಗಿ ಮೈಸೂರಿನ ತಿರುಪುರ್ ಖಾದಿ ಪಂಚೆ ಬಗ್ಗೆಯೂ ಮಳಿಗೆಯವರಲ್ಲಿ ವಿಚಾರಿಸಿದರು. ತಾವು ಧರಿಸಿಕೊಂಡಿದ್ದ ಮೈಸೂರಿನ ತಿರುಪುರ್ ಖಾದಿ ಪಂಚೆ ತೋರಿಸಿ, ಇದು ಇದೆಯಾ ಎಂದು ಮಳಿಗೆ ಸಿಬ್ಬಂದಿಯನ್ನು ಕೇಳಿದರು. ಈ ವೇಳೆ ಮಳಿಗೆ ಸಿಬ್ಬಂದಿ 'ಸರ್.. ತಿರುಪುರ್ ಖಾದಿ ಪಂಚೆ ನಮ್ಮಲ್ಲಿ ಇದೆ' ಎಂದು ಅದನ್ನು ಸಿದ್ದರಾಮಯ್ಯರಿಗೆ ತೋರಿಸಿದರು. ಬಳಿಕ ಒಟ್ಟು 30 ತಿರುಪುರ್ ಖಾದಿ ಪಂಚೆಯನ್ನು ಸಿದ್ದರಾಮಯ್ಯ ಖರೀದಿ ಮಾಡಿದರು.
: ಪ್ರತಿಪಕ್ಷ ನಾಯಕ ಶಾಪಿಂಗ್ ಮೂಡ್ ನಲ್ಲಿದ್ದರು. ಬುಧವಾರ ಬೆಂಗಳೂರಿನ ಅವೆನ್ಯೂ ರಸ್ತೆಯ ಖಾದಿ ಭಂಡಾರ್ ಮಳಿಗೆಗೆ ತೆರಳಿ ಒಟ್ಟು 30 ಪಂಚೆಗಳನ್ನು ಖರೀದಿಸಿದರು.
ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಿಂದ ಅವೆನ್ಯೂ ರಸ್ತೆಯಲ್ಲಿನ ಖಾದಿ ಭಂಡಾರ್‌ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರಳಿ ಖಾದಿ ಖರೀದಿ ಮಾಡಿದರು. ಪ್ರತಿ ಪಂಚೆ ಬೆಲೆ 650 ರೂ. ಇತ್ತು. ಮಳಿಗೆಯಲ್ಲಿ ಹಣ ಪಾವತಿಸಿದ ಸಿದ್ದರಾಮಯ್ಯ ಒಟ್ಟು 30 ಪಂಚೆಯನ್ನು ಖರೀದಿ ಮಾಡಿದರು.
ಖಾದಿ ಮಳಿಗೆಯಲ್ಲಿ ವಿವಿಧ ವೈರೈಟಿಯ ಪಂಚೆಗಳ ಬಗ್ಗೆ ಸಿದ್ದರಾಮಯ್ಯ ವಿಚಾರಿಸಿದರು. ವಿಶೇಷವಾಗಿ ಮೈಸೂರಿನ ತಿರುಪುರ್ ಖಾದಿ ಪಂಚೆ ಬಗ್ಗೆಯೂ ಮಳಿಗೆಯವರಲ್ಲಿ ವಿಚಾರಿಸಿದರು. ತಾವು ಧರಿಸಿಕೊಂಡಿದ್ದ ಮೈಸೂರಿನ ತಿರುಪುರ್ ಖಾದಿ ಪಂಚೆ ತೋರಿಸಿ, ಇದು ಇದೆಯಾ ಎಂದು ಮಳಿಗೆ ಸಿಬ್ಬಂದಿಯನ್ನು ಕೇಳಿದರು. ಈ ವೇಳೆ ಮಳಿಗೆ ಸಿಬ್ಬಂದಿ 'ಸರ್.. ತಿರುಪುರ್ ಖಾದಿ ಪಂಚೆ ನಮ್ಮಲ್ಲಿ ಇದೆ' ಎಂದು ಅದನ್ನು ಸಿದ್ದರಾಮಯ್ಯರಿಗೆ ತೋರಿಸಿದರು.
ಬಳಿಕ ಒಟ್ಟು 30 ತಿರುಪುರ್ ಖಾದಿ ಪಂಚೆಯನ್ನು ಸಿದ್ದರಾಮಯ್ಯ ಖರೀದಿ ಮಾಡಿದರು.
ಸದನದಲ್ಲಿ ಪಂಚೆ ಕಳಚಿಕೊಂಡಿದ್ದ ಸಿದ್ದರಾಮಯ್ಯ..!
ಈ ಹಿಂದೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪಂಚೆ ಕಳಚಿ ಬಿದ್ದಿದ್ದ ಘಟನೆಯೂ ನಡೆದಿತ್ತು.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಗಂಭೀರವಾಗಿ ಚರ್ಚೆ ಮಾಡುತ್ತಿರುವಾಗ ಅವರ ಪಂಚೆ ಕಳಚಿ ಹೋಗಿತ್ತು.
ಆಗ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಎದ್ದು ಬಂದು ಮೆತ್ತಗೆ ಕಿವಿಯಲ್ಲಿ ಹೇಳಿ ನಿಮ್ಮ ಪಂಚೆ ಕಳಚಿಕೊಂಡಿದೆ ಎಂದು ಎಚ್ಚರಿಸಿದ್ದರು. ಆಗ ಸಿದ್ದರಾಮಯ್ಯನವರು, ನಗುನಗುತ್ತಾ ಪಂಚೆ ಬಿಚ್ಚಿ ಹೋಗಿದೆ, ಸರಿ ಮಾಡಿಕೊಳ್ಳುತ್ತೇನೆ, ಈಶ್ವರಪ್ಪ ಪಂಚೆ ಬಿಚ್ಚಿ ಹೋಗಿದೆ ಎಂದು ಹೇಳಿ ಕುಳಿತುಕೊಂಡು ಸರಿಪಡಿಸಿಕೊಂಡಿದ್ದರು.