ಸಿಎಂ ಕುರ್ಚಿ ಮೇಲೆ ಡಿ.ಕೆ ಶಿವಕುಮಾರ್ ಕಣ್ಣು! ಸಭೆಯಲ್ಲಿ ಹೊರಬಂತು ಡಿಕೆ ಮನದಾಸೆ

ಸಿಎಂ ಕುರ್ಚಿ ಮೇಲೆ ಡಿ.ಕೆ ಶಿವಕುಮಾರ್ ಕಣ್ಣು
ರಾಜ್ಯ ಒಕ್ಕಲಿಗರ ಸಂಘದ ಸಭೆಯಲ್ಲಿ ಡಿ.ಕೆ ಶಿವಕುಮಾರ್ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ಸಿಎಂ ಆಗಲು ಪರೋಕ್ಷವಾಗಿ ಸಮುದಾಯದ ಆಶೀರ್ವಾದ ಕೇಳಿದ್ದಾರೆ. ನಿಮ್ಮ ಶಕ್ತಿ ಉತ್ಸಾಹ ನೋಡಿದ್ರೆ. ವಿಧಾನಸೌಧಕ್ಕೆ ತೆಗೆದುಕೊಂಡು ಹೋಗಿ ಕೂರಿಸುವ ತಾಕತ್ತು ಇದೆ. ನೀವು ಮನಸ್ಸು ಮಾಡಿದ್ರೆ ವಿಧಾನಸೌಧ, ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಈ ಅವಕಾಶವನ್ನು ಕಳೆದುಕೊಳ್ಳಲು ಹೋಗಬೇಡಿ ಸಮುದಾಯದ ಆಶೀರ್ವಾದ ನನ್ನ ಮೇಲಿರಲಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.