ಬಡವರಿಗೆ ಸಹಾಯ ಮಾಡಿ ರಾಜಕೀಯ ಬೇಡ-ಮಾಜಿ ಸಚಿವ ಸಂತೋಷ ಲಾಡ್
ಧಾರವಾಡ: ಕೊರೊನಾ ಮಹಾಮಾರಿ ಸೋಂಕಿನಿAದ ಭಯ ಭೀತರಾಗಿರುವ ಸಂಕಷ್ಟದ ಸಮಯದಲ್ಲಿ ಕಡುಬಡವರಿಗೆ ಹಾಗೂ ಆಹಾರದ ಅವಶ್ಯಕತೆ ಇದ್ದವರಿಗೆ ಅಳ್ನಾವರದಲ್ಲಿ ಉಚಿತ ಊಟದ ಸೇವೆಗೆ ಚಾಲನೆ ಕೊಟ್ಟ ಸಂತೋಷ ಲಾಡ್. ಮೊದಲನೆಯ ಕೋವಿಡ್-೧೯ ಅಲೆಯಲ್ಲಿ ಕೂಲಿ ಕಾರ್ಮಿಕರಿಗೆ ಸ್ವಲ್ಪ ತೊಂದರೆಯಾಗಿದ್ದು, ಎರಡನೇಯ ಕೋವಿಡ್-೧೯ ಅಲೆಯಲ್ಲಿ ಬಹಳಷ್ಟು ಕೂಲಿ ಕಾರ್ಮಿಕರಿಗೆ ಅನಾನುಕೂಲತೆ ಉಂಟಾಗಿದೆ. ಕನಿಷ್ಠ ಒಂದು ತಿಂಗಳವರೆಗೆ ಪ್ರತಿ ದಿನ ಊಟದ ವ್ಯವಸ್ಥೆಯನ್ನು ಕಲಘಟಗಿ ಹಾಗೂ ಅಳ್ನಾವರದಲ್ಲಿ ಮಾಡಲಾಗಿದೆ. ಅದರ ಜೊತೆಗೆ ೨೫೦೦ ಕ್ವಿಂಟಾಲ್ ಅಕ್ಕಿಯನ್ನು ತರಿಸದ್ದು, ಪ್ರತಿ ಮನೆಗೆ ೫ ಕೆಜಿ ಅಕ್ಕಿಯಂತೆ ೫೦ ರಿಂದ ೬೦ ಸಾವಿರ ಕುಟುಂಬಕ್ಕೆ ಮುಟ್ಟಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು. ನಂತರ ಕಲಘಟಗಿ ಕ್ಷೇತ್ರದಲ್ಲಿ ಕೋವಿಡ್-೧೯ ಸೋಂಕಿನಿAದ ಮೃತರಾದ ಕುಟುಂಬದವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಸಹಾಯ ಮಾಡುವುದಾಗಿ ಘೋಷಿಸಿದರು. ಮುಗದ ಕ್ರಾಸ್‌ನಲ್ಲಿ ಗ್ರಾಮಕ್ಕೆ ಹೋಗುವಾಗ ಅಡ್ಡಿಪಡಿಸಲು ಮುಂದಾದ ಗ್ರಾಮದಲ್ಲದವರೂ ಹಾಗೂ ಕ್ಷೇತ್ರದಲ್ಲದವರೂ ಅಡ್ಡಿಪಡಿಸುತ್ತಿದ್ದಾಗ ಊರಿನ ಗ್ರಾಮಸ್ಥರು ಬಂದು ಕರೆದುಕೊಂಡು ಹೋದ ಘಟನೆ ನಡೆಯಿತು. ನಂತರ ಲಾಡ್ ಅವರು ಮಾತನಾಡಿ, ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ಬಡವರ ಸೇವೆ ಬಿಟ್ಟು ರಾಜಕೀಯ ಮಾಡುವುದು ಬೇಡ ಹಾಗೂ ಸಾಧ್ಯವಾದರೆ ನೀವು ಬಡವರ ಸೇವೆ ಮಾಡಿ ಎಂದು ಹೇಳಿದರು. ನಮ್ಮ ಸ್ನೇಹಿತರಿಗೆ ಕಳಕಳಿಯ ಮನವಿ ನಾನು ಯಾವುದೇ ಕೆಲಸ ಮಾಡಿದರೂ ಜನರಿಗೆ ಅನುಕೂಲವಾಗುವಂತೆ ಮಾಡುತ್ತಿದ್ದೇನೆ. ನಮ್ಮನ್ನು ರಸ್ತೆಯಲ್ಲಿ ನಿಲ್ಲಿಸುವುದು ಒಳ್ಳೆಯದಲ್ಲ, ನಮ್ಮನ್ನು ಪ್ರಶ್ನೆ ಮಾಡುತ್ತೀರಾ, ಅದು ಒಳ್ಳೆಯದ್ದಲ್ಲ ಅದು ನಿಮಗೆ ಗೊತ್ತಿದೆ ಆದರೆ ಇಂತಹ ಸಾಹಸಕ್ಕೆ ಹೋಗುವುದು ಬೇಡ, ನನಗೆ ಈ ರೀತಿ ಮಾಡುವುದರಿಂದ ಮುಂದೆ ಜನರು ನಿಮಗೂ ಇದೇ ರೀತಿ ಮಾಡುತ್ತಾರೆ, ಇದರಲ್ಲಿ ರಾಜಕೀಯ ಬೇಡ, ನಾವು ಎಲ್ಲರೂ ಗೆಳೆಯರೇ, ಈ ಕಷ್ಟದ ಸಮಯದಲ್ಲಿ ಸಹಾಯ ಮಾಡಿ ಎಂದು ಮನವಿ ಮಾಡಿದರು.