ಡ್ರಗ್ಸ್ ಕೇಸ್‌ನಿಂದಾಗಿ ಶಾರುಖ್‌ ಪುತ್ರ ಆರ್ಯನ್ ಖಾನ್‌ರ ‘ಈ’ ಪ್ಲಾನ್ ಕ್ಯಾನ್ಸಲ್ ಆಗಿದೆ!

ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೊತ್ತಿಗೆ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿದೇಶದಲ್ಲಿ ಇರಬೇಕಿತ್ತು. ಹೆಸರಾಂತ ಫಿಲ್ಮ್ ಮೇಕರ್ಸ್ ಬಳಿ ಚಲನಚಿತ್ರದ ಬಗ್ಗೆ ತರಬೇತಿ ಪಡೆಯಬೇಕಿತ್ತು. ಆದರೆ, ಅಷ್ಟರಲ್ಲೇ ಡ್ರಗ್ಸ್ ಕೇಸ್‌ನಲ್ಲಿ ಆರ್ಯನ್ ಖಾನ್ ಸಿಲುಕಿದರು.

ಡ್ರಗ್ಸ್ ಕೇಸ್‌ನಿಂದಾಗಿ ಶಾರುಖ್‌ ಪುತ್ರ ಆರ್ಯನ್ ಖಾನ್‌ರ ‘ಈ’ ಪ್ಲಾನ್ ಕ್ಯಾನ್ಸಲ್ ಆಗಿದೆ!
ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೊತ್ತಿಗೆ ಬಾದ್‌ಷಾ ಪುತ್ರ ವಿದೇಶದಲ್ಲಿ ಇರಬೇಕಿತ್ತು. ಹೆಸರಾಂತ ಫಿಲ್ಮ್ ಮೇಕರ್ಸ್ ಬಳಿ ಚಲನಚಿತ್ರದ ಬಗ್ಗೆ ತರಬೇತಿ ಪಡೆಯಬೇಕಿತ್ತು. ಆದರೆ, ಅಷ್ಟರಲ್ಲೇ ಡ್ರಗ್ಸ್ ಕೇಸ್‌ನಲ್ಲಿ ಆರ್ಯನ್ ಖಾನ್ ಸಿಲುಕಿದರು. ಹೀಗಾಗಿ, ಆರ್ಯನ್ ಖಾನ್ ಅವರ ಕೆಲ ಪ್ಲಾನ್‌ಗಳಿಗೆ ಪೆಟ್ಟು ಬಿದ್ದಿದೆ. ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ಆರ್ಯನ್ ಖಾನ್ ಮುಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿತ್ತು. ಆ ಹಿನ್ನೆಲೆಯಲ್ಲಿ ಶನಿವಾರ (ಅಕ್ಟೋಬರ್ 2) ರಾತ್ರಿ ಎನ್‌ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ 8ಕ್ಕೂ ಹೆಚ್ಚು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅಲ್ಲಿ ಅನೇಕ ರೀತಿಯ ಮಾದಕ ವಸ್ತುಗಳು ಪತ್ತೆಯಾಗಿದ್ದವು. ಈ ರೇವ್ ಪಾರ್ಟಿಗೆ ಬರುವುದಕ್ಕೆ ತಲಾ 80 ಸಾವಿರ ರೂಪಾಯಿ ಶುಲ್ಕ ನಿಗದಿ ಮಾಡಲಾಗಿತ್ತು ಎನ್ನಲಾಗಿತ್ತು. 25 ದಿನಗಳ ಬಳಿಕ ಜಾಮೀನು ಮಂಜೂರು ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಆರ್ಯನ್ ಖಾನ್‌ಗೆ ಅಕ್ಟೋಬರ್ 28 ರಂದು ಜಾಮೀನು ಲಭಿಸಿತ್ತು. 25 ದಿನಗಳ ಕಾಲ ಬಂಧನದಲ್ಲಿದ್ದ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಹಾಗೂ ಬಂಧನದ ಕಹಿ ಅನುಭವ ಉಂಟಾದ ಬಳಿಕ ಆರ್ಯನ್ ಖಾನ್ ಮನೆ ಬಿಟ್ಟು ಹೊರಗೆ ಬರಲಿಲ್ಲ. ಇದೀಗ ಕಹಿ ಘಟನೆಯನ್ನು ಮರೆತು ಆರ್ಯನ್ ಖಾನ್ ಪ್ರಯತ್ನಿಸುತ್ತಿದ್ದಾರೆ. ತಮ್ಮ ಭವಿಷ್ಯದ ಬಗ್ಗೆ ಹಲವು ಪ್ಲಾನ್‌ಗಳನ್ನು ಮಾಡಿಕೊಂಡಿದ್ದಾರೆ. ಫಾರಿನ್ ಪ್ಲಾನ್ ಕ್ಯಾನ್ಸಲ್! ತಂದೆ ಶಾರುಖ್ ಖಾನ್‌ರಂತೆ ತಾವೂ ಬಾಲಿವುಡ್‌ಗೆ ಪದಾರ್ಪಣೆ ಮಾಡಬೇಕೆಂಬ ಹಂಬಲ ಆರ್ಯನ್ ಖಾನ್‌ಗಿದೆ. ವಿದೇಶದಲ್ಲಿ ಖ್ಯಾತ ಫಿಲ್ಮ್ ಮೇಕರ್‌ಗಳಿಂದ ಚಲನಚಿತ್ರದ ಬಗ್ಗೆ ತರಬೇತಿ ಪಡೆಯುವ ಪ್ಲಾನ್ ಆರ್ಯನ್ ಖಾನ್ ಅವರಿಗಿತ್ತು. ಆದರೆ, ಅದು ಸಾಕಾರಗೊಳ್ಳುವ ಮುನ್ನವೇ ಡ್ರಗ್ಸ್ ಕೇಸ್‌ನಲ್ಲಿ ಆರ್ಯನ್ ಖಾನ್ ಅರೆಸ್ಟ್ ಆಗ್ಬಿಟ್ಟರು. ಇದೀಗ ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿರುವುದರಿಂದ ಆರ್ಯನ್ ಖಾನ್ ವಿದೇಶಕ್ಕೆ ತೆರಳುವಂತಿಲ್ಲ. ಹೀಗಾಗಿ, ಫಾರಿನ್‌ನಲ್ಲಿ ಚಲನಚಿತ್ರ ತರಬೇತಿ ಪಡೆಯುವ ಆರ್ಯನ್ ಖಾನ್ ಪ್ಲಾನ್ ಕ್ಯಾನ್ಸಲ್ ಆಗಿದೆ. ಶಾರುಖ್ ಸಿನಿಮಾಗಳಿಗೆ ಕೆಲಸ ಮಾಡುತ್ತಾರಾ ಆರ್ಯನ್ ಖಾನ್? ಫಿಲ್ಮ್ ಮೇಕಿಂಗ್ ಕುರಿತು ತರಬೇತಿ ಪಡೆಯಲು ಆದಿತ್ಯ ಚೋಪ್ರಾ ಅವರ ಯಶ್ ರಾಜ್ ಫಿಲ್ಮ್ಸ್ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್‌ನಲ್ಲಿ ಆರ್ಯನ್ ಖಾನ್ ತರಬೇತಿ ಪಡೆಯುವ ಸಾಧ್ಯತೆ ಇದೆ. ಶಾರುಖ್ ಖಾನ್ ಸದ್ಯ ‘ಪಠಾಣ್’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ‘ಪಠಾಣ್’ ಚಿತ್ರದ ಪ್ರೊಡಕ್ಷನ್ ಕಾರ್ಯಗಳಲ್ಲೂ ಆರ್ಯನ್ ಖಾನ್ ತೊಡಗಿಕೊಳ್ಳುವ ಚಾನ್ಸಸ್ ಕೂಡ ಇದೆ ಎನ್ನಲಾಗಿದೆ.