ಮಂಗಳೂರು: ನೂತನ ಎಸಿಪಿಗಳ ಅಧಿಕಾರ ಸ್ವೀಕಾರ
ಮಂಗಳೂರು,ಫೆ.5:ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಂಗಳೂರು ದಕ್ಷಿಣ ಉಪವಿಭಾಗ ಮತ್ತು ಉತ್ತರ ಉಪವಿಭಾಗದಲ್ಲಿ ನೂತನ ಎಸಿಪಿಗಳು ಅಧಿಕಾರ ಸ್ವೀಕರಿಸಿದ್ದಾರೆ.
ಮಂಗಳೂರು ದಕ್ಷಿಣ ಉಪವಿಭಾಗದ ನೂತನ ಸಹಾಯಕ ಪೊಲೀಸ್ ಆಯುಕ್ತರಾಗಿ ಧನ್ಯಾ ಎನ್. ನಾಯಕ್ ಮತ್ತು ಮಂಗಳೂರು ಉತ್ತರ ಉಪವಿಭಾಗದ ನೂತನ ಸಹಾಯಕ ಪೊಲೀಸ್ ಆಯುಕ್ತರಾಗಿ ಮನೋಜ್ ಕುಮಾರ್ ನಾಯ್ಕಾ ಅಧಿಕಾರ ಸ್ವೀಕರಿಸಿದ್ದಾರೆ.
ಮೂಲತಃ ಅಂಕೋಲಾದ ಧನ್ಯಾ ನಾಯಕ್ 2020ರ ಕೆಎಸ್‌ಪಿಎಸ್ ಬ್ಯಾಚ್‌ನವರು. ಮೂಲತಃ ತುಮಕೂರಿನ ಮನೋಜ್ ಕುಮಾರ್ 2017ರ ಕೆಎಎಸ್ ಬ್ಯಾಚ್‌ನವರು.