ಅಂಗಾಂಗ ದಾನ ಮಾಡಲು ಮುಂದಾದ ನಟ ವಿಜಯ್ ದೇವರಕೊಂಡ ನಿರ್ಧಾರ
ಹೈದ್ರಬಾದ್: ನಟ ವಿಜಯ್ ದೇವರಕೊಂಡ ತಮ್ಮ ಅಂಗಾಂಗಗಳನ್ನು ದಾನಕ್ಕೆ ವಾಗ್ದಾನ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಅಂಗಾಂಗ ದಾನ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ತಿಳಿಸಿದ್ದಾರೆ.
'ಸಾವಿನ ನಂತರ ಅನೇಕ ಜನರು ತಮ್ಮ ಅಂಗಗಳನ್ನು ದಾನ ಮಾಡಲು ಮುಂದೆ ಬರುವುದನ್ನು ನೋಡುವುದು ನಂಬಲಾಗದ ಸಂಗತಿ.
ವಿಜಯ್ ದೇವರಕೊಂಡ ಅವರು ಇದೇ ವೇಳೇ ಮತನಾಡುತ್ತ ದಕ್ಷಿಣ ಏಷ್ಯಾದಲ್ಲಿ ಹೆಚ್ಚು ಅಂಗಾಂಗ ದಾನಿಗಳಿಲ್ಲ. ಎಲ್ಲರೂ ಅಂಗಾಂಗ ದಾನದ ಪ್ರತಿಜ್ಞೆ ಮಾಡುವಂತೆ ಕರೆ ನೀಡಿದರು. ಸದ್ಯ ನಟ ಶೀಘ್ರದಲ್ಲೇ 'ಕುಶಿ' ಸಿನಿಮಾದಲ್ಲಿ ಕೆಲಸವನ್ನು ಪ್ರಾರಂಭಿಸಲಿದ್ದಾರೆ. ಶಿವ ನಿರ್ವಾಣ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಲವ್ ಸ್ಟೋರಿಯಲ್ಲಿ ಸಮಂತಾ ಅವರ ಎದುರು ವಿಜಯ್ ನಟಿಸಲಿದ್ದಾರೆ.