ನಾಳೆ 'ತ್ರಿಬಲ್ ರೈಡಿಂಗ್' ರಿಲೀಸ್

ನಾಳೆ 'ತ್ರಿಬಲ್ ರೈಡಿಂಗ್' ರಿಲೀಸ್

ಮಹೇಶ್ ಗೌಡ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ʼತ್ರಿಬ್ಬಲ್ ರೈಡಿಂಗ್ʼ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ. ರೋಮ್ಯಾಂಟಿಕ್ ಆಕ್ಷನ್ ಎಂಟರ್ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಗಣೇಶ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ, ಮೇಘ ಶೆಟ್ಟಿ, ರಚನಾ ಇಂದರ್ ಸೇರಿದಂತೆ ಮೂವರು ನಾಯಕಿಯರು ಅಭಿನಯಿಸಿದ್ದಾರೆ. ಸಾಧು ಕೋಕಿಲ, ರವಿಶಂಕರ್, ಕುರಿ ಪ್ರತಾಪ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಶೋಭರಾಜ್ ಸೇರಿದಂತೆ ಮೊದಲಾದ ಕಲಾವಿದರು ಈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ.