ಗಮನಿಸಿ: ಬುಧವಾರ, ಗುರುವಾರದಂದು ಬೆಂಗಳೂರಿನ ಈ ಭಾಗಗಳಲ್ಲಿ ಇರೋಲ್ಲ ʼಕರೆಂಟ್ʼ
ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ, ರಿಪೇರಿ ಹಾಗೂ ನಿರ್ವಹಣೆ ಕೆಲಸ ಜೊತೆಗೆ ಬಾಕಿ ಉಳಿದಿರುವ ಕೆಲ ಪ್ರಾಜೆಕ್ಟ್ ಗಳನ್ನು ಪೂರೈಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಬುಧವಾರ, ಗುರುವಾರ ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ತಿಳಿಸಲಾಗಿದೆ.
ಬೆಸ್ಕಾಂ ವೃತ್ತದ ರಾಮನಗರ, ಬೆಸ್ಕಾಂ ವಿಭಾಗದ ಕನಕಪುರ ವ್ಯಾಪ್ತಿಯಲ್ಲಿ ಈ ಕಾರ್ಯ ನಡೆಯಲಿದ್ದು ಹೀಗಾಗಿ ತುಗಣಿ ಫೀಡರ್ಸ್, ಹಾರೋಹಳ್ಳಿ, ಟಿಕೆ ಹಳ್ಳಿ ಹಾಗೂ ಸೋಮನಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಬೀಳುತ್ತಿದ್ದ ಮಳೆಯ ಕಾರಣಕ್ಕೆ ರಿಪೇರಿ, ನಿರ್ವಹಣೆ ಕಾರ್ಯಗಳು ಹಾಗೂ ಪ್ರಾಜೆಕ್ಟ್ ಗಳು ನೆನೆಗುದಿಗೆ ಬಿದ್ದಿದ್ದವು. ಈಗ ಈ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಹಾಗೂ ಗುರುವಾರದಂದು ವಿದ್ಯುತ್ ನಿಲುಗಡೆಯಾಗುತ್ತಿದೆ ಎಂದು ಹೇಳಲಾಗಿದೆ.